ಬ್ರಿಡ್ಜ್‌ಟೌನ್: 11 ವರ್ಷಗಳ ನಂತರ ಕೊನೆಗೂ ಭಾರತ ಐಸಿಸಿ ಟ್ರೋಫಿಗೆ ಮುತ್ತಿಟ್ಟಿದೆ. 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಭಾರತ ಕೊನೆಗೂ ವಿಶ್ವಕಪ್‌ಗೆ (T20 World Cup 2024) ಮುತ್ತಿಟ್ಟು ವಿಶೇಷ ಸಾಧನೆಗೆ ಪಾತ್ರವಾಗಿದೆ. ಆದ್ರೆ ಕೊನೆಯಲ್ಲಿ ಪಂದ್ಯದ ಗತಿಯನ್ನೇ ಬದಲಿಸಿದ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಸ್ಟನಿಂಗ್ ಕ್ಯಾಚ್ ವಿವಾದಕ್ಕೆ ಕಾರಣವಾಗಿದೆ.
Advertisement
ಹೌದು. 15ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್‌ಗೆ ಹೆನ್ರಿಕ್ ಕ್ಲಾಸೆನ್ 24 ರನ್ ಚಚ್ಚಿದ್ದರು. ಇದರಿಂದ ಟೀಂ ಇಂಡಿಯಾ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಆ ನಂತರ ಜಸ್‌ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಹಾಗೂ ಹರ್ಷ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.
Advertisement
ಕೊನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಬೇಕಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಡೇವಿಡ್ ಮಿಲ್ಲರ್ (David Miller) ಮೊದಲ ಎಸೆತವನ್ನೇ ಸಿಕ್ಸರ್ ಬಾರಿಸಲು ಯತ್ನಿಸಿದ್ದರು. ಈ ವೇಳೆ ಲಾಂಗ್ ಆನ್‌ನಲ್ಲಿದ್ದ ಸೂರ್ಯಕುಮಾರ್ ಯಾದವ್ ಬೌಂಡರಿ-ರೋಪ್ ಕ್ಯಾಚ್ (Surya Clean Catch) ಪಡೆಯುವ ಮೂಲಕ ಮಿಲ್ಲರ್‌ಗೆ ಪೆವಿಲಿಯನ್ ಹಾದಿ ತೋರಿದರು. ಡೇವಿಡ್ ಮಿಲ್ಲರ್ ಔಟಾಗುವ ವೇಳೆಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ನೆಲ ಕಚ್ಚಿದ್ದರು. ಹಾಗಾಗಿ ಈ ಒಂದು ಕ್ಯಾಚ್ ಭಾರತಕ್ಕೆ ವಿಶ್ವಕಪ್ ಗೆಲುವಿಗೆ ಕಾರಣವಾಯಿತು. ಆದ್ರೆ ಸೂರ್ಯಕುಮಾರ್ ಹಿಡಿದ ಈ ಕ್ಯಾಚ್ ವಿವಾದಕ್ಕೆ ಕಾರಣವಾಗಿದೆ.
Advertisement
Advertisement
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರು, ಕ್ರಿಕೆಟ್ ತಜ್ಷರು ಹಾಗೂ ಕ್ರಿಕೆಟ್ ಅಭಿಮಾನಿಗಳು ಸೂರ್ಯ ಕ್ಯಾಚ್ ರೋಫ್ ಮಾಡುವ ಮುನ್ನ ಕಾಲು ಬೌಂಡರಿ ಲೈನ್‌ಗೆ ತಗುಲಿದೆ. ಸೂರ್ಯನ ಕ್ಯಾಚ್ ಅನ್ನು 3ನೇ ಅಂಪೈರ್ ವಿವಿಧ ಕೋನಗಳಿಂದ ಪರಿಶೀಲಿಸಬೇಕಿತ್ತು. ಆದ್ರೆ ಟಿವಿ ಅಂಪೈರ್ ಕೇವಲ ಎರಡು ಮೂರು ಕೋನಗಳಲ್ಲಿ ಪರಿಶೀಲಿಸಿ ಭಾರತ ತಂಡದ ಪರವಾಗಿ ತೀರ್ಪು ನೀಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ವಿಶ್ವ ವಿಜೇತ ಭಾರತ- ಟಿ20 ವಿಶ್ವಕಪ್‌ಗೆ ಈಗ ಟೀಂ ಇಂಡಿಯಾ ಬಾಸ್
ಶನಿವಾರ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲ್ಲಲು 177 ರನ್‌ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ (South Africa) ಅಂತಿಮವಾಗಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಇದನ್ನೂ ಓದಿ: ವಿಶ್ವಕಪ್ ಜೊತೆಗೆ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದೀರಿ: ಟೀಂ ಇಂಡಿಯಾಕ್ಕೆ ಮೋದಿ ಅಭಿನಂದನೆ
ಕೊನೇ ಓವರ್‌ನಲ್ಲಿ ಆಗಿದ್ದೇನು?
ಕೊನೆಯ 6 ಎಸೆತಗಳಲ್ಲಿ 16 ರನ್ ಬೇಕಿತ್ತು. ಪಾಂಡ್ಯ ಎಸೆದ ಮೊದಲ ಎಸೆತವನ್ನು ಮಿಲ್ಲರ್ ಸಿಕ್ಸರ್‌ಗೆ ಯತ್ನಿಸಿದರು. ಆದರೆ ಬೌಂಡರಿ ಗೆರೆಯ ಬಳಿ ಸೂರ್ಯಕುಮಾರ್ ಯಾದವ್ ಅವರು ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಮಿಲ್ಲರ್ 21 ರನ್ ಗಳಿಸಿ ಔಟ್ ಆದರು. ನಂತರ ಬಂದ ರಬಡಾ ಮೊದಲ ಎಸೆತ ಬೌಂಡರಿಗೆ ಅಟ್ಟಿದರು. ನಂತರ ಎಸೆತದಲ್ಲಿ ಲೆಗ್‌ಬೈ ಮೂಲಕ 1 ರನ್ ಬಂತು. ನಂತರ 1 ರನ್ ಒಂದು ವೈಡ್ ಬಂತು. ಐದನೇ ಎಸೆತದಲ್ಲಿ ಸಿಕ್ಸ್ ಸಿಡಿಸಲು ಹೋದ ರಬಡಾ ಕ್ಯಾಚ್ ನೀಡಿ ಔಟಾದ ಬೆನ್ನಲ್ಲೇ ಸಂಭ್ರಮಾಚರಣೆ ಆರಂಭವಾಯಿತು. ಕೊನೆಯ ಎಸೆತದಲ್ಲಿ ಒಂದು ರನ್ ಬಂತು. ಈ ಮೂಲಕ ಭಾರತ ಎರಡನೇ ಬಾರಿ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತು.