ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಶಿಲ್ಪಾ ಶೆಟ್ಟಿ ಟಿವಿ ಕಾರ್ಯಕ್ರಮವೊಂದರಲ್ಲಿ ‘ಭಾಂಗಿ’ ಪದ ಬಳಸಿ ಎಸ್‍ಸಿ- ಎಸ್‍ಟಿ ಸಮುದಾಯವನ್ನ ಅವಮಾನಿಸಿದ್ದಾರೆಂಬ ಆರೋಪದ ಮೇಲೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ.
ವರದಿಯ ಪ್ರಕಾರ ಟೈಗರ್ ಜಿಂದಾ ಹೈ ಚಿತ್ರದ ಪ್ರಮೋಷನ್ ವೇಳೆ ಸಲ್ಮಾನ್ ಖಾನ್ ತನ್ನ ನೃತ್ಯ ಕೌಶಲ್ಯದ ಬಗ್ಗೆ ಹೇಳುವಾಗ ಈ ಸ್ಟೆಪ್ ಮಾಡ್ತಾ ನಾನು ಭಾಂಗಿ ತರ ಕಾಣ್ತೀನಿ ಎಂದಿದ್ದರು. ಶಿಲ್ಪಾ ಶೆಟ್ಟಿ ಕೂಡ ಈ ಪದವನ್ನ ಬಳಸಿದ್ದರು.
Advertisement
Advertisement
ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಸಲ್ಮಾನ್ ಖಾನ್ ನಟನೆಯ ಟೈಗರ್ ಜಿಂದಾ ಹೈ ಚಿತ್ರ ಪ್ರದರ್ಶನವಾಗುತ್ತಿದ್ದ ವೇಳೆ ವಾಲ್ಮೀಕಿ ಸಮುದಾಯದ ಸದಸ್ಯರು ಜೈಪುರದ ರಾಜ್‍ಮಂದಿಲ್ ಚಿತ್ರಮಂದಿರದ ಎದುರು ನಟನ ವಿರುದ್ಧ ಪ್ರತಿಭಟನೆ ನಡೆಸಿದ್ರು. ಚಿತ್ರದ ಪ್ರಮೋಷನ್ ವೇಳೆ ಜಾತಿಸೂಚಕ ಪದ ಬಳಸಿ ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯದವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ನಟನ ಪ್ರತಿಕೃತಿ ದಹಿಸಿದ್ರು. ತಮ್ಮ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೋರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ರು. ಕೋಟಾದಲ್ಲಿ ಪ್ರತಿಭಟನಾಕಾರರು ನಟನ ವಿರುದ್ಧ ಘೋಷಣೆ ಕೂಗಿ ಚಿತ್ರಮಂದಿರವನ್ನು ಧ್ವಂಸ ಮಾಡಲು ಯತ್ನಿಸಿದ್ರು. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ರಾಜ್ಯದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ.
Advertisement
Advertisement
ಸಲ್ಮಾನ್ ಖಾನ್ ಹಾಗೂ ಶೆಲ್ಪಾ ಶೆಟ್ಟಿ ವಿರುದ್ಧ ದಾಖಲಾಗಿರುವ ದೂರುಗಳಿಗೆ ಸಂಬಂಧಿಸಿದಂತೆ 7 ದಿನಗಳ ಒಳಗಾಗಿ ಉತ್ತರಿಸಬೇಕೆಂದು ಪರಿಶಿಷ್ಟ ಜಾತಿಯ ರಾಷ್ಟ್ರೀಯ ಸಮಿತಿಯು ವಾರ್ತಾ ಮತ್ತು ಪ್ರಚಾರ ಸಚಿವಾಲಯ ಮತ್ತು ದೆಹಲಿ ಹಾಗೂ ಮುಂಬೈನ ಪೊಲೀಸ್ ಕಮಿಷನರ್‍ಗಳಿಗೆ ಕೇಳಿದೆ.