ನವದೆಹಲಿ: ಮಲೆಯಾಳಂನ `ಒರು ಅಡಾರ್ ಲವ್’ ಚಿತ್ರದ ಹಾಡೊಂದರಲ್ಲಿ ತನ್ನ ಕಣ್ ಸನ್ನೆ ಮೂಲಕ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೈದ್ರಾಬಾದ್ ನ ಇಬ್ಬರು ಮತ್ತೆ ಪ್ರಿಯಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಣ್ಣು ಹೊಡೆಯುವುದು ಹಾಗೂ ಕಣ್ಣಿನ ಹುಬ್ಬು ಹಾರಿಸುವುದು ಇಸ್ಲಾಂಗೆ ವಿರುದ್ಧ ಎಂದು ದೂರಿದ್ದು, ಈಗ ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಿಯಾ ಕಣ್ಸನ್ನೆ ವಿರುದ್ಧ ದೂರು ದಾಖಲಾಗಿದೆ. ಇದನ್ನೂ ಓದಿ: ಕಣ್ಸನ್ನೆ ಚೆಲುವೆಗೆ ಪ್ರೇಮಿಗಳ ದಿನದಂದೇ ಸಂಕಷ್ಟ – ಪ್ರಿಯಾ ವಾರಿಯರ್ ಹಾಡಿನ ವಿರುದ್ಧ ಕೇಸ್
Advertisement
Advertisement
ಈ ಹಿಂದೆ ಕೂಡ ಪ್ರಿಯಾ ಹಾಗೂ ಚಿತ್ರ ನಿರ್ದೇಶಕರ ವಿರುದ್ಧ ದೂರು ದಾಖಲಾಗಿತ್ತು. ಚಿತ್ರದ ಹಾಡಿನಲ್ಲಿರುವ ಸಾಲುಗಳು ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ ಎಂದು ಆರೋಪಿಸಿ ಹೈದ್ರಾಬಾದ್‍ನ ಫಲಕನಾಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೊಹಮ್ಮದ್ ಅಬ್ದುಲ್ ಖಾನ್ ತನ್ನ ಸ್ನೇಹಿತರ ಜೊತೆ ದೂರು ದಾಖಲಿಸಿದ್ದು, ಪ್ರವಾದಿ ಕೀರ್ತನೆಗಳನ್ನು ಸಿನಿಮಾ ಹಾಡಿಗೆ ಬಳಸಿರುವುದು ಸರಿಯಲ್ಲ ಎಂದು ದೂರಿನಲ್ಲಿ ಹೇಳಿದ್ದರು.
Advertisement
ಮಲೆಯಾಳಂ ಬೆಡಗಿ ಪ್ರಿಯಾ ಕಣ್ಸನ್ನೆ ಹಾಡಿನಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ಹಾಡಿನ ಸಾಹಿತ್ಯ ಹಾಗೂ ಅದರಲ್ಲಿ ತೋರಿಸಿರುವ ದೃಶ್ಯ ಧರ್ಮದ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. `ಒರು ಅಡಾರ್ ಲವ್’ ಚಿತ್ರದಿಂದ ಮಾಣಿಕ್ಯ ಮಲರಾಯ ಪೂವಿ ಹಾಡನ್ನು ತೆಗೆದು ಹಾಕುವಂತೆಯೂ ಮನವಿಯನ್ನು ಕೂಡ ಮಾಡಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್
Advertisement
ಈ ಆರೋಪವನ್ನು `ಒರು ಅಡಾರ್ ಲವ್’ ನಿರ್ದೇಶಕ ಓಮರ್ ಲುಲು ನಿರಾಕರಿಸಿದ್ದು, ಉತ್ತರ ಕೇರಳದ ಮಲಬಾರ್ ನಲ್ಲಿ ಪ್ರತಿ ಮದುವೆ ಸಮಾರಂಭದ ವೇಳೆ ಈ ಹಾಡನ್ನು ಹಾಡಲಾಗುತ್ತದೆ. ಮಲಬಾರ್ ನ ಮುಸ್ಲಿಮರು 1978ರಿಂದಲೇ ಈ ಹಾಡನ್ನು ಹಾಡುತ್ತಿದ್ದಾರೆ. ಈವರೆಗೆ ಈ ಹಾಡು ಆಕ್ಷೇಪಾರ್ಹವಾಗಿರಲಿಲ್ಲ. ಸಿನಿಮಾದಲ್ಲಿ ಮಾತ್ರ ಏಕೆ ಆಕ್ಷೇಪಾರ್ಹ ಎಂದು ಲುಲು ಪ್ರಶ್ನೆ ಮಾಡಿದ್ದಾರೆ.
ನಿರ್ದೇಶಕ ಒಮರ್ ಅಬ್ದುಲ್ ವಹಾಬ್ ನಿರ್ದೇಶನ ಈ ಸಿನಿಮಾ 1.32 ಸೆಕೆಂಡ್ ನ ಹಾಡಿನ ವಿಡಿಯೋದಲ್ಲಿ ಪ್ರಿಯಾ ಅವರ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಈ ಹಾಡು ತನ್ನ ಹಳೆಯ ಪ್ರೀತಿಯನ್ನು ನೆನಪು ಮಾಡಿಕೊಳ್ಳುವ ಸನ್ನಿವೇಶದಲ್ಲಿ ಮೂಡಿಬಂದಿದೆ. ಹೈಸ್ಕೂಲ್ ನಲ್ಲಿ ಉಂಟಾದ ಮೊದಲ ಲವ್ ಕುರಿತಾಗಿ ಹಾಡನ್ನು ಚಿತ್ರೀಕರಿಸಲಾಗಿದೆ.