ಗದಗ: ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಜಾಗ ಈಗ ಪ್ರವಾಸಿ ತಾಣವಾಗುತ್ತಿದೆ. ದಿನದಿಂದ ದಿನಕ್ಕೆ ಇಲ್ಲಿಗೆ ಭೇಟಿ ನೀಡಲು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು (ಜ.23) ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಫ್ರಾನ್ಸ್ ಪ್ರವಾಸಿಗರ ತಂಡ ಭೇಟಿ ನೀಡಿದೆ.
15 ಜನರಿದ್ದ ವಿದೇಶಿ ಪ್ರವಾಸಿಗರ ತಂಡದಿಂದ ನಿಧಿ ಸಿಕ್ಕ ಜಾಗವನ್ನು ವೀಕ್ಷಣೆ ಮಾಡಿದೆ. ಉತ್ಖನನದ ಸ್ಥಳ ನೋಡಿ ವಿದೇಶಿ ಪ್ರವಾಸಿಗರು ಖುಷಿಪಟ್ಟಿದ್ದಾರೆ. ಇನ್ನೂ ಪ್ರಜ್ವಲ್ ಪ್ರಾಮಾಣಿಕತೆ ಕೇಳೆ ಮಿರಾಕಲ್ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಪ್ರವಾಸಿಗರ ತಂಡ ಖಷಿ ಹಂಚಿಕೊಂಡಿದೆ. ಇದನ್ನೂ ಓದಿ: ಲಕ್ಕುಂಡಿ ಉತ್ಖನನ – ಹಸಿರು ಬಣ್ಣದ ನಾಗರ ಶಿಲೆ, ಮಣ್ಣಿನ ಬಿಲ್ಲೆ, ಮೂಳೆ ಪತ್ತೆ
ಪ್ರಾಮಾಣಿಕತೆಯಿಂದ ಸಿಕ್ಕ 470 ಗ್ರಾಂ ಚಿನ್ನವನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದ ರಿತ್ತಿ ಕುಟುಂಬಕ್ಕೆ (Ritti family) ಲಕ್ಕುಂಡಿ (Lakkundi) ಗ್ರಾಮ ಪಂಚಾಯತ್ 30*40 ಸೈಟ್ ಘೋಷಣೆ ಮಾಡಿದೆ. ಪ್ರಜ್ವಲ್ ರಿತ್ತಿಗೆ ಉಚಿತ ಶಿಕ್ಷಣ., ಪ್ರಜ್ವಲ್ ತಾಯಿ ಗಂಗಮ್ಮಗೆ ಕೆಲಸ ಕೊಡುವುದಾಗಿ ಪಂಚಾಯತ್ ಭರವಸೆ ನೀಡಿದೆ.
ಜ.21 ರಂದು ಉತ್ಖನನದ ವೇಳೆ ಹಸಿರು ಬಣ್ಣದ ನಾಗರಶಿಲೆ, ಸುಟ್ಟ ಮಣ್ಣಿನ ಬಿಲ್ಲೆ ಹಾಗೂ ಮೂಳೆಗಳು ಪತ್ತೆಯಾಗಿದ್ದವು. ಹಸಿರು ಬಣ್ಣದಲ್ಲಿ ನಾಗರ ಶಿಲೆ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿತ್ತು. ಜ.22 ರಂದು ಆರತಿ ಬೆಳಗುವ ಆಕಾರದ ಲೋಹದ ವಸ್ತು ಪತ್ತೆಯಾಗಿತ್ತು. ಇದನ್ನೂ ಓದಿ: ಲಕ್ಕುಂಡಿಯಲ್ಲಿ ಉತ್ಖನನ – ಲೋಹದ ಶಿವಲಿಂಗ ಪತ್ತೆ

