ನ್ಯೂಯಾರ್ಕ್: ಐಸಿಸ್(ISIS) ಸೇರಿದಂತೆ ಅಮೆರಿಕದಿಂದ ನಿಷೇಧಕ್ಕೆ ಒಳಗಾಗಿರುವ ಉಗ್ರ ಸಂಘಟನೆಗಳಿಗೆ ಫ್ರಾನ್ಸ್‌ನಲ್ಲಿರುವ ದೊಡ್ಡ ಸಿಮೆಂಟ್ ಕಂಪನಿ(French Cement Company) ಆರ್ಥಿಕ ಸಹಾಯ ಮಾಡಿದ್ದನ್ನು ಒಪ್ಪಿಕೊಂಡಿದೆ.
ಫ್ರಾನ್ಸ್‌ನ ದೊಡ್ಡ ಸಿಮೆಂಟ್ ತಯಾರಕ ಕಂಪನಿ ಲಫಾರ್ಗೆ(Lafarge) ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ್ದಾಗಿ ಅಮೆರಿಕ ಕೋರ್ಟ್(US Court) ಮುಂದೆ ತಪ್ಪೊಪ್ಪಿಕೊಂಡಿದೆ. ಬ್ರೂಕ್ಲಿನ್ ಫೆಡರಲ್ ನ್ಯಾಯಾಲಯದಲ್ಲಿ ಕಂಪನಿ ಈ ಹೇಳಿಕೆ ನೀಡಿದೆ. ಕಂಪನಿಯೊಂದು ಉಗ್ರರಿಗೆ ನೆರವು ನೀಡಿದ್ದನ್ನು ಅಮೆರಿಕದಲ್ಲಿ ಒಪ್ಪಿಕೊಂಡಿದ್ದು ಇದೇ ಮೊದಲು ಎಂದು ವರದಿಯಾಗಿದೆ. ಇದನ್ನೂ ಓದಿ: ಸಿದ್ದು ಸೋಲಿಸಲು BJP ರಣತಂತ್ರ – ವರುಣಾದಲ್ಲಿ ವಿಜಯೇಂದ್ರ ಕಣಕ್ಕಿಳಿಸಲು ಪ್ಲ್ಯಾನ್
Advertisement
Advertisement
ಪ್ರತಿ ತಿಂಗಳು 816,000 ಡಾಲರ್ ದೇಣಿಗೆ ನೀಡಲಾಗಿದೆ ಮತ್ತು ಐಸಿಸ್ ನಿಯಂತ್ರಣಕ್ಕೆ ಒಳಗಾಗಿದ್ದ ಪೂರೈಕೆದಾರರಿಂದ ಕಚ್ಚಾ ವಸ್ತುಗಳನ್ನು ಖರೀದಿಸಲು 3,447,528 ಡಾಲರ್ ಪಾವತಿಸಲಾಗಿದೆ ಎಂದು ಹೇಳಿದೆ. ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ 778 ದಶಲಕ್ಷ ಡಾಲರ್(ಅಂದಾಜು 6,400 ಕೋಟಿ ರೂ). ಹಣವನ್ನು ಪಾವತಿಸಲು ಕಂಪನಿ ಸಮ್ಮತಿ ನೀಡಿದೆ.
Advertisement
ಸಿರಿಯಾದಲ್ಲಿ ಲಘಾರ್ಗೆ ಸಿಮೆಂಟ್ ಉತ್ಪಾದನೆ ಮಾಡುತ್ತಿತ್ತು. ಅಂತ ಕಲಹದ ಸಮಯದಲ್ಲಿ ಉತ್ಪಾದನಾ ಘಟಕ ಮತ್ತು ಉದ್ಯೋಗಿಗಳನ್ನು ರಕ್ಷಿಸಲು ಆರ್ಥಿಕ ಸಹಾಯ ಮಾಡಲಾಗಿದೆ. 2013ರ ಆಗಸ್ಟ್‌ನಿಂದ 2014ರ ನವೆಂಬರ್ ವರೆಗೆ ಅಂದಿನ ಅಧಿಕಾರಿಗಳು ಸಿರಿಯಾದಲ್ಲಿನ ಸಂಘಟನೆಗಳಿಗೆ ಹಣ ನೀಡಿದ್ದರು. ಆದರೆ 2017ರಲ್ಲೇ ಇವರೆಲ್ಲ ಕಂಪನಿಯನ್ನು ತೊರೆದಿದ್ದಾರೆ ಎಂದು ಲಫಾರ್ಗೆ ಹೇಳಿದೆ.
Advertisement
2015 ರಲ್ಲಿ ಲಫಾರ್ಗೆ ಕಂಪನಿಯನ್ನು ಖರೀದಿಸಿದ ಸ್ವಿಜರ್‌ಲ್ಯಾಂಡ್ ಹೋಲ್ಸಿಮ್ ಗ್ರೂಪ್ ಪ್ರತಿಕ್ರಿಯಿಸಿ, ಈ ಹಣದ ವ್ಯವಹಾರದಲ್ಲಿ ನಾವು ಭಾಗಿಯಾಗಿಲ್ಲ. ನಮ್ಮ ಗಮನಕ್ಕೆ ಬಾರದೇ ಲಫಾರ್ಗೆ ಈ ವ್ಯವಹಾರ ನಡೆಸಿದೆ. ಈ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.