ಮಂಡ್ಯ: ಸಕ್ಕರೆ ಕಾರ್ಖಾನೆಯಲ್ಲಿ ಫ್ರೀಜರ್ ಬಾಯ್ಲರ್ ಬ್ಲಾಸ್ಟ್ ಆದ ಪರಿಣಾಮ ಗದ್ದೆಗೆ ರಾಸಾಯನಿಕ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
Advertisement
ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿರುವ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸುಮಾರು ಆರು ಲಕ್ಷ ಲೀಟರ್ ಸಾಮಥ್ರ್ಯದ ಬಾಯ್ಲರ್ ಬ್ಲಾಸ್ಟ್ ಆಗಿದೆ. ಸ್ಫೋಟದ ರಭಸಕ್ಕೆ ಪಕ್ಕದಲ್ಲಿ ಇದ್ದು ಕಾಂಪೌಂಡ್ ಗೋಡೆ ಛಿದ್ರವಾಗಿದೆ. ಬಾಯ್ಲರ್ ಅಕ್ಕಪಕ್ಕ ಸುಮಾರು 20 ಮೀಟರ್ ವ್ಯಾಪ್ತಿಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಈ ವೇಳೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಪರಿಣಾಮ ಓರ್ವನಿಗಷ್ಟೇ ಗಾಯವಾಗಿದ್ದು ಭಾರೀ ದುರಂತ ತಪ್ಪಿದೆ.
Advertisement
Advertisement
ಬಾಯ್ಲರ್ ಸ್ಪೋಟಗೊಂಡ ಪರಿಣಾಮ ಅದರೊಳಗಿದ್ದ ಡಿಸ್ಟಿಲರಿ ವಾಟರ್ ಕಾರ್ಖಾನೆ ಸುತ್ತಮುತ್ತಲ ಗದ್ದೆಗಳಿಗೆ ನುಗ್ಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಬೆಳೆ ನಾಶವಾಗಿದೆ ಎಂದು ರೈತ ಉಮೇಶ್ ಪ್ರತಿಕ್ರಿಯಿಸಿದ್ದಾರೆ.
Advertisement
ಗದ್ದೆಗೆ ಮಾತ್ರ ಅಲ್ಲದೇ ಕೆಮಿಕಲ್ ನೀರು ಶಿಂಷಾ ನದಿಗೆ ಹರಿದು ಹೋಗುತ್ತಿದ್ದು ಜಲಚರಗಳಿಗೂ ಕಂಟಕವಾಗುವ ಸಾಧ್ಯತೆಯಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv