ತುಮಕೂರು: ಜಿಲ್ಲೆಯ ಪಾವಗಡದ (Pavagada) ಹಿರಿಯ ಸ್ವಾತಂತ್ರ್ಯ ಹೋರಾಟಗಾರ (Freedom Fighter) 103 ವರ್ಷದ ವಿ.ಎನ್ ನರಸರೆಡ್ಡಿ (VN Reddy) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿ.ಎನ್ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೇ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಇಂದು ಮೃತರ ಸ್ವಗ್ರಾಮವಾದ ವೆಂಕಟಪುರ ಗ್ರಾಮದ ಸಮೀಪದ ತೋಟದಲ್ಲಿ ಅಂತ್ಯಕ್ರಿಯೆ ನಡೆದಿದೆ. ಇದನ್ನೂ ಓದಿ: ನಾಳೆ ರಫೇಲ್‌ನಲ್ಲಿ ಹಾರಲಿದ್ದಾರೆ ರಾಷ್ಟ್ರಪತಿ ಮುರ್ಮು
ವಿ.ಎನ್ ರೆಡ್ಡಿಯವರು ಮಾಜಿ ಉಪರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ, ಎ.ಎಂ ಲಿಂಗಣ್ಣ, ಕೊಲ್ಲೂರು ಸುಬ್ಬಾರಾವು, ಪಡಪಲ್ಲಿ ಚಿದಂಬರ ರೆಡ್ಡಿಯವರ ಒಡನಾಡಿಯಾಗಿದ್ದರು. 1951-52ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲೂ ವಿ.ಎನ್ ರೆಡ್ಡಿ ಮತ ಚಲಾಯಿಸಿದ್ದಾರೆ. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ದಾಖಲೆಗಳನ್ನು ನಾಶಪಡಿಸಲು ಪಾವಗಡ ತಾಲೂಕು ಕಛೇರಿಗೆ ಇಲಿಗಳ ಬಾಲಕ್ಕೆ ಬಟ್ಟೆ ಸುತ್ತಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ದಾಖಲೆಗಳಿರುವ ಕೊಠಡಿಗೆ ಇಲಿಗಳನ್ನು ಬಿಟ್ಟು ದಾಖಲೆಗಳನ್ನು ಸುಟ್ಟಿದ್ದರು. ಇದನ್ನೂ ಓದಿ: ಪಲ್ಲಂಗದಾಟಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಮಗಳ ಹತ್ಯೆ – ಮಲತಂದೆ ಅರೆಸ್ಟ್
ಈ ಕೃತ್ಯ ಎಸಗಿದ್ದಕ್ಕೆ ರಾತ್ರಿ ಮಲಗಿದ್ದ ವೇಳೆ ಪೊಲೀಸರು ವಿ.ಎನ್ ನರಸರೆಡ್ಡಿ ಅವರನ್ನು ಸೇರಿದಂತೆ ಏಳು ಜನರನ್ನು ಬಂಧಿಸಿ ತುಮಕೂರು ಜೈಲಿಗೆ ಹಾಕಿದ್ದರು. ಅಲ್ಲಿಯೂ ಬ್ರಿಟಿಷರ ಆಳ್ವಿಕೆ ವಿರುದ್ಧ ಪ್ರತಿಭಟನೆ, ಹೋರಾಟಗಳನ್ನು ಮುಂದುವರಿಸಿದ್ದರಿಂದ ತುಮಕೂರು ಜೈಲಿನಿಂದ ಬೆಂಗಳೂರು ಸೆಂಟ್ರಲ್ ಜೈಲಿಗೆ ಬಂಧಿಸಿ ಒಟ್ಟು 32 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಇದನ್ನೂ ಓದಿ: ಮೊಂಥಾ ಎಫೆಕ್ಟ್: 100ಕ್ಕೂ ಹೆಚ್ಚು ರೈಲುಗಳು, 35 ವಿಮಾನಗಳ ಹಾರಾಟ ರದ್ದು
ಜೈಲು ಶಿಕ್ಷೆ ಅನುಭವಿಸಿ ಬಂದ ನಂತರ ಪಾವಗಡ ತಾಲೂಕಿನಾದ್ಯಂತ ಎತ್ತಿನಗಾಡಿಯಲ್ಲಿ ಸಂಚರಿಸಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸ್ವಾತಂತ್ರ‍್ಯ ಹೋರಾಟದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀತಿಪಾಠ: ಪ್ರಹ್ಲಾದ್ ಜೋಶಿ

