ಕಂಪಾಲಾ: ಹೊಸ ವರ್ಷ (New Year) ಆಚರಣೆ ವೇಳೆ ಕಾಲ್ತುಳಿತಕ್ಕೆ ಸಿಲುಕಿ 9 ಮಂದಿ ಸಾವನ್ನಪ್ಪಿದ ಘಟನೆ ಉಗಾಂಡಾದ ಶಾಪಿಂಗ್ ಮಾಲ್‍ನಲ್ಲಿ (Shopping Mall) ನಡೆದಿದೆ.
ಉಗಾಂಡಾದ (Uganda) ಕಂಪಾಲಾದ ಫ್ರೀಡಂ ಸಿಟಿ ಮಾಲ್‍ನಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷ ಆಚರಣೆಗಾಗಿ ಈ ಮಾಲ್‍ಗೆ ಜನರು ಸೇರಿದ್ದರು. ಈ ವೇಳೆ ಪಟಾಕಿ ಪ್ರದರ್ಶನವನ್ನು ವೀಕ್ಷಿಸಲು ಜನರಲ್ಲಿ ನೂಕು ನುಗ್ಗಲು ಉಂಟಾಗಿದೆ.
Advertisement
Advertisement
ಇದರಿಂದಾಗಿ ಮಾಲ್‌ನಲ್ಲಿ ಕಾಲ್ತುಳಿತ ಉಂಟಾಗಿದ್ದು, ಪರಿಣಾಮವಾಗಿ 9 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಹಲವಾರು ಜನರಿಗೆ ಗಾಯಗಳಾಗಿದೆ. ಈ ಬಗ್ಗೆ ಉಗಾಂಡಾ ಪೊಲೀಸ್ ಫೋರ್ಸ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಇನ್ನು 15 ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ರಿಲೀಸ್ – ಜನಾರ್ದನ ರೆಡ್ಡಿ
Advertisement
. @Lukowoyesigyire “The Katwe Territorial Police are investigating an incident of rash and neglect that occurred at a New Year’s Eve event at the Freedom City Mall Namasuba and resulted in the deaths of nine people, including several juveniles”
1/3
— Uganda Police Force (@PoliceUg) January 1, 2023
Advertisement
ಟ್ವೀಟ್‍ನಲ್ಲಿ ಏನಿದೆ?: ಫ್ರೀಡಂ ಸಿಟಿ ಮಾಲ್ ನಮಸುಬಾದಲ್ಲಿ ಹೊಸ ವರ್ಷದಂದು ಸಂಭವಿಸಿದ ಘಟನೆಯಲ್ಲಿ ಮಕ್ಕಳು ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಘಟನೆ ವೇಳೆ ಗಾಯಗೊಂಡ ವ್ಯಕ್ತಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು ಎಂದು ತಿಳಿಸಿದೆ. ಇದನ್ನೂ ಓದಿ: ಸಿ.ಟಿ ರವಿ ಒಬ್ಬ ಕುಡುಕ, ಗಾಂಜಾನೂ ಹೊಡಿತಾರೆ: ಬಿ.ಕೆ ಹರಿಪ್ರಸಾದ್