ಲಕ್ನೋ: ವಿಶ್ವದಲ್ಲೇ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದ್ದ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪೆನಿಯ ಆಡಳಿತ ನಿರ್ದೇಶಕ ಮೋಹಿತ್ ಗೋಯಲ್ ಅವರನ್ನು ವಂಚನೆ ಪ್ರಕರಣದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಆಯಾಮ್ ಎಂಟರ್‍ಪ್ರೈಸಸ್ ಕಂಪೆನಿಗೆ 16 ಲಕ್ಷ ರೂ. ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಯಲ್ ಅವರನ್ನು ಗುರುವಾರ ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ ಡೆಪ್ಯುಟಿ ಎಸ್‍ಪಿ ಮನೀಶ್ ಮಿಶ್ರಾ ತಿಳಿಸಿದ್ದಾರೆ.
Advertisement
ಏನಿದು ವಂಚನೆ ಪ್ರಕರಣ?
ಗೋಯಲ್ ಮತ್ತು ಇತರರು ಫ್ರೀಡಂ 251 ಫೋನುಗಳ ವಿತರಣೆ ಪಡೆದುಕೊಳ್ಳುವಂತೆ 2015ರ ನವೆಂಬರ್‍ನಲ್ಲಿ ನಮ್ಮನ್ನು ಒತ್ತಾಯಿಸಿದ್ದರು. ಒಪ್ಪಂದಂತೆ ನಾವು ನಾವು ರಿಂಗಿಂಗ್ ಬೆಲ್ಸ್ ಕಂಪೆನಿಗೆ 30 ಲಕ್ಷ ರೂ. ಪಾವತಿಸಿದ್ದೆವು. ನಮಗೆ 14 ಲಕ್ಷ ರೂ. ಮೌಲ್ಯದ ಉತ್ನನ್ನಗಳನ್ನು ಮಾತ್ರವೇ ಪೂರೈಸಿ 16 ಲಕ್ಷ ರೂ.ಗಳನ್ನು ವಂಚಿಸಲಾಗಿದೆ. ನಾವು ಪ್ರಶ್ನಿಸಿದ್ದಕ್ಕೆ ನಮಗೆ ನಮಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಿ ರಿಂಗಿಂಗ್ ಬೆಲ್ಸ್ ವಿರುದ್ಧ ಆಯಾಮ್ ಎಂಟರ್‍ಪ್ರೈಸಸ್ ಕಂಪೆನಿ ದೂರು ನೀಡಿತ್ತು.
Advertisement
ವಿಶ್ವದಲ್ಲೇ ಕಡಿಮೆ ಕೇವಲ 251 ರೂ. ಸ್ಮಾರ್ಟ್ ಫೋನ್ ನೀಡುವುದಾಗಿ ರಿಂಗಿಂಗ್ ಬೆಲ್ ಹೇಳಿಕೊಂಡಿತ್ತು. ಈ ಆಶ್ವಾಸನೆ ನೋಡಿ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಫೋನ್ ಖರೀದಿಗೆ ಬುಕ್ ಮಾಡಿದ್ದರು. ಇದರ ಜೊತೆ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿ ತಯಾರಿಸುವುದಾಗಿ ರಿಂಗಿಂಗ್ ಬೆಲ್ ಹೇಳಿಕೊಂಡಿತ್ತು.