Bengaluru CityDistrictsKarnatakaLatestMain Post

ಮಲ್ಲೇಶ್ವರಂ ಬ್ರಾಹ್ಮಣ ಸಭಾ ವತಿಯಿಂದ 150 ಬ್ರಾಹ್ಮಣ ಬಾಲಕರಿಗೆ ಉಚಿತ ಉಪನಯನ

ಬೆಂಗಳೂರು: ಮಲ್ಲೇಶ್ವರಂ ಬ್ರಾಹ್ಮಣ ಸಭಾ ವತಿಯಿಂದ ಅರಮನೆ ಮೈದಾನದ ರಾಯಲ್ ಸೆನಟ್ ಹಾಲ್‌ನಲ್ಲಿ ಆರ್ಥಿಕವಾಗಿ ಹಿಂದುಳಿದ, ಬ್ರಾಹ್ಮಣ ಸ್ಪಾರ್ತ, ಶ್ರೀ ವೈಷ್ಣವ ಹಾಗೂ ಮಧ್ವ ಸಂಪ್ರಾದಯದ 150 ಬಾಲಕರಿಗೆ ಉಚಿತವಾಗಿ ಉಪನಯನ ಕಾರ್ಯಕ್ರಮ ನಡೆಯಿತು.

ಮಲ್ಲೇಶ್ವರಂ ಬ್ರಾಹ್ಮಣ ಸಭಾ ಅಧ್ಯಕ್ಷ ಪ್ರಕಾಶ್ ಎಸ್. ಅಯ್ಯಂಗಾರ್, ವೇದಬ್ರಹ್ಮ ಭಾನುಪ್ರಕಾಶ್ ಶರ್ಮ, ಅನೂಪ್ ಆಯ್ಯಂಗಾರ್, ಬಿಜೆಪಿ ಮುಖಂಡ ವಿನಾಯಕ್ ಜೋಷಿ ನೂರಾರು ಅಗಮ, ವೇದ ಪಂಡಿತ, ಆಚಾರ್ಯರು ಉಚಿತ ಉಪನಯನ ಸಮಾರಂಭಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಧ್ಯವಂದನೆಗೆ ಬೆಳ್ಳಿಪಾತ್ರೆ, ಉದ್ದರಣೆಯನ್ನೂ ವಿತರಿಸಲಾಯಿತು. ಇದನ್ನೂ ಓದಿ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ʼಚರಕ ಶಪಥʼ ಪ್ರಮಾಣ ವಚನ ನೀಡಿದ್ದಕ್ಕೆ ಕಾಲೇಜು ಡೀನ್‌ ವಜಾ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಪ್ರಕಾಶ್ ಎಸ್. ಅಯ್ಯಂಗಾರ್, ಆದಿ ಶಂಕರರು, ರಾಮಾನುಜರು, ಮಧ್ವಚಾರ್ಯರ ತತ್ವ ಸಿದ್ಧಾಂತಗಳನ್ನು ಅನುಸರಿಸುವ ಎಲ್ಲಾ ಬ್ರಾಹ್ಮಣರೂ ಒಂದೇ. ನಾವೆಲ್ಲರೂ ಸಂಘಟಿತರಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಎಲ್ಲಾ ವರ್ಗ, ಧರ್ಮದವರು ಬ್ರಾಹ್ಮಣ ಸಮುದಾಯವನ್ನು ಗೌರವದಿಂದ, ಪ್ರೀತಿಪಾತ್ರರಾಗಿ ಕಾಣುತ್ತಾರೆ. ದೇಶ ಅಭಿವೃದ್ಧಿಗೆ ಮಹಾನ್ ಕೊಡುಗೆ ನೀಡಿದ ಬ್ರಾಹ್ಮಣ ಸಮುದಾಯ ಇಂದು ಸಂಕಷ್ಟದಲ್ಲಿದೆ. ಸಂಸ್ಕೃತಿ, ಸಂಪ್ರಾದಯ, ಸನಾತನ ಧರ್ಮ ಉಳಿಯಬೇಕು. ಆದ್ದರಿಂದ ಆರ್ಥಿಕವಾಗಿ ಹಿಂದುಳಿದ 150 ಬ್ರಾಹ್ಮಣ ಬಾಲಕರಿಗೆ ಉಚಿತವಾಗಿ ಉಪನಯನ ಮತ್ತು ಸಂಧ್ಯವಂದನೆ ಮಾಡಲು ಬೆಳ್ಳಿ ಪಾತ್ರೆ, ಉದ್ದರಣೆ ಮತ್ತು ಸಂಧ್ಯವಂದನೆ ಪುಸ್ತಕ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಇಲ್ಲದಿರುವ ವಿಷಯವನ್ನು ಸೃಷ್ಟಿಸಿಲು ಪ್ರಯತ್ನಿಸ್ತಿದ್ದಾರೆ: ಡಾ.ಕೆ.ಸುಧಾಕರ್

ಉಪನಯನ ಮಾಡಲು ಲಕ್ಷಾಂತರ ರೂ. ವೆಚ್ಚವಾಗುತ್ತದೆ. ಮಲ್ಲೇಶ್ವರಂ ಬ್ರಾಹ್ಮಣ ಸಭಾ ವತಿಯಿಂದ 150 ಬಾಲಕರಿಗೆ ಉಪನಯನದ ಸಂಪೂರ್ಣ ಖರ್ಚುನ್ನು ಭರಿಸಿದೆ. ಬ್ರಾಹ್ಮಣ ಸಮುದಾಯ ಸರ್ವೇ ಜನಾಃ ಸುಖಿನೋ ಭವಂತು ಎಂದು ಭಾವಿಸಿ, ಜೀವನ ನಡೆಸುತ್ತಾರೆ. ಎಲ್ಲರಿಗೂ ಒಳಿತು ಬಯಸುವ ಬ್ರಾಹ್ಮಣ ಸಮುದಾಯ ಆರ್ಥಿಕವಾಗಿ ಸಬಲರಾಗಬೇಕು. ರಾಜಕೀಯ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಹೆಚ್ಚಿನ ಅವಕಾಶ ಸಿಗಬೇಕು. ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬುದು ನಮ್ಮ ಆಶಯ ಎಂದು ಹಾರೈಸಿದರು.

Leave a Reply

Your email address will not be published.

Back to top button