ಬೆಂಗಳೂರು: ಹೈದರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಬಳಿಕ ಬೆಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಮಹಿಳೆಯರ ರಕ್ಷಣೆಗೆ ಹೊಸ ಹೊಸ ಪ್ಲಾನ್‍ಗಳನ್ನು ಮಾಡುತ್ತಿದ್ದಾರೆ. ಹೊಸ ಪ್ಲಾನ್‍ಗಳಲ್ಲಿ ಮಹಿಳೆಯರಿಗೆ ಉಚಿತ ಸವಾರಿ ಯೋಜನೆ ಕೂಡ ಒಂದು.
ಉಚಿತ ಸವಾರಿ ಯೋಜನೆಯ ಉಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬಹುದು. ರಾತ್ರಿ ಹತ್ತು ಗಂಟೆಯಿಂದ ಮುಂಜಾನೆ ಆರು ಗಂಟೆಯ ಒಳಗಾಗಿ ಮಹಿಳೆಯರು ಉಚಿತ ಸವಾರಿ ಯೋಜನೆ ಉಪಯೋಗಪಡಿಸಿಕೊಳ್ಳಬಹುದು.
Advertisement
Advertisement
ಮಹಿಳೆಯರು ರಾತ್ರಿ ಸಮಯದಲ್ಲಿ ಮನೆಗೆ ಹೋಗುವುದಕ್ಕೆ ಬಸ್ ಮತ್ತು ಸಾರಿಗೆ ವ್ಯವಸ್ಥೆ ವ್ಯತ್ಯಯ ಕಂಡು ಬಂದರೆ 1091 ನಂಬರ್ ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಬೇಕು. ಕೂಡಲೇ ಕಂಟ್ರೋಲ್ ರೂಂ ಸಿಬ್ಬಂದಿ ಮಹಿಳೆಯರು ಇರುವ ಸ್ಥಳ ಹಾಗೂ ಮಹಿಳೆ ತಲುಪಬೇಕಾದ ಸ್ಥಳದ ಮಾಹಿತಿ ಪಡೆದುಕೊಳ್ಳುತ್ತಾರೆ. ಬಳಿಕ ಮಹಿಳೆ ಇರುವ ಸ್ಥಳಕ್ಕೆ ಹತ್ತಿರ ಠಾಣೆಯ ಹೊಯ್ಸಳ ವಾಹನವನ್ನು ಕಳುಹಿಸಿಕೊಡುತ್ತಾರೆ.
Advertisement
ಹೊಯ್ಸಳ ಬಂದು ಮಹಿಳೆಯಿಂದ ಮಾಹಿತಿ ಪಡೆದು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಕೆಲಸವನ್ನು ಚಾಚು ತಪ್ಪದೇ ಸಿಬ್ಬಂದಿ ಮಾಡುತ್ತಾರೆ. ಸವಾರಿ ಯೋಜನೆಯನ್ನು ಕೇವಲ ಪ್ರಚಾರಕ್ಕೆನಾದರೂ ಮಾಡಿದ್ದಾರಾ ಅಥವಾ ನಿಜವಾಗಿಯೂ ಪೊಲೀಸರು ಸವಾರಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರಾ ಎನ್ನುವುದಕ್ಕೆ ಪಬ್ಲಿಕ್ ಟಿವಿ ರಿಯಾಲಿಟಿ ಚಕ್ ಮಾಡಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚಕ್‍ನಲ್ಲಿ ಸವಾರಿ ಯೋಜನೆ ಸತ್ಯ ದರ್ಶನ ಹೇಗಿದೆ ಎಂಬುದನ್ನು ತೆರೆದಿಡುವ ಕೆಲಸ ಮಾಡಿದೆ.