ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ ಯಾವಾಗಿನಿಂದ ಹೆಚ್ಚಳವಾಯಿತೋ ವಂಚಕರು ಅಮಾಯಕರನ್ನು ಗುರಿಯಾಗಿಸಿಕೊಂಡು, ಅವರು ಕಷ್ಟಪಟ್ಟು ದುಡಿದ ಹಣವನ್ನು ದೋಚಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಲೇ ಇದ್ದಾರೆ. ಇಂತಹ ವಂಚನೆಗೆ ಪ್ರಮುಖ ಬ್ಯಾಂಕ್ಗಳ ಗ್ರಾಹಕರೇ ಒಳಗಾಗಿದ್ದಾರೆ. ಕಳೆದೆರಡು ತಿಂಗಳಿಂದ ಇಂತಹ ವಂಚನೆಗಳು ಹೆಚ್ಚಾಗಿ ವರದಿಯಾಗಿದೆ.
ಇದೀಗ ಭಾರತ ಸರ್ಕಾರ ಭಾರತೀಯ ಬಳಕೆದಾರರಿಗೆ ಉಚಿತ ಫೋನ್ ಹಾಗೂ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ಹೊಸ ಮೋಸದ ಸಂದೇಶಗಳನ್ನು ವಾಟ್ಸಪ್ನಲ್ಲಿ (Whatsapp Message) ಕಳುಹಿಸಲಾಗುತ್ತಿದೆ.
Advertisement
Advertisement
ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಎಲ್ಲಾ ಭಾರತೀಯ ಬಳಕೆದಾರರಿಗೆ 239 ರೂ. ಮೌಲ್ಯದ ಉಚಿತ ಫೋನ್ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ವಾಟ್ಸಪ್ ಸಂದೇಶವನ್ನು ಕಳುಹಿಸಲಾಗುತ್ತಿದೆ. ಈ ರೀಚಾರ್ಜ್ 28 ದಿನಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ರೀಚಾರ್ಜ್ ಅನ್ನು ಪಡೆಯಬಹುದು ಎಂದು ನಕಲಿ ಸಂದೇಶದಲ್ಲಿ (Fake Message) ತಿಳಿಸಲಾಗುತ್ತಿದೆ.
Advertisement
ಆದರೆ ಈ ಸಂದೇಶಗಳು ಸಂಪೂರ್ಣ ನಕಲಿಯಾಗಿದ್ದು, ಅಂತಹ ಯಾವುದೇ ಯೋಜನೆಯನ್ನು ಸರ್ಕಾರ ಘೋಷಿಸಿಲ್ಲ ಎಂದು ಪಿಬಿಐ (ಪತ್ರಿಕಾ ಮಾಹಿತಿ ಬ್ಯೂರೋ) ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಟ್ವಿಟ್ಟರ್ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಎಲಾನ್ ಮಸ್ಕ್
Advertisement
ವಂಚನೆಗಳಿಂದ ದೂರ ಉಳಿಯುವುದು ಹೇಗೆ?
ವಾಟ್ಸಪ್ ಮೂಲಕ ಬರುವ ಇಂತಹ ವಂಚನೆಗಳಿಗೆ ಬೀಳುವುದು ಸುಲಭ. ಮುಖ್ಯವಾಗಿ ಜನರು ತಮ್ಮ ಕುಟುಂಬ ಅಥವಾ ಸ್ನೇಹಿತರಿಂದ ಬರುವ ಇಂತಹ ನಕಲಿ ಸಂದೇಶಗಳನ್ನು ತಕ್ಷಣವೇ ನಂಬಿಬಿಡುತ್ತಾರೆ. ಆದರೆ ಇವು ನಕಲಿ ಹೌದೋ ಅಲ್ಲವೋ ಎಂಬುದನ್ನು ಕಂಡು ಹಿಡಿಯಲು ನೀವು ಕೆಲವು ಹಂತಗಳನ್ನು ಅನುಸರಿಸಿ.
ಮೊದಲನೆಯದಾಗಿ ಸಂದೇಶದ ಭಾಷೆಗೆ ಗಮನ ಕೊಡಿ. ಅಂತಹ ಸಂದೇಶಗಳ ಭಾಷೆ ಸಾಮಾನ್ಯವಾಗಿ ಪರಿಪೂರ್ಣವಾಗಿರುವುದಿಲ್ಲ. ಅವುಗಳಲ್ಲಿ ಹೆಚ್ಚಾಗಿ ವ್ಯಾಕರಣ ದೋಷಗಳು ಇರುತ್ತವೆ. ಅಧಿಕೃತ ಸಂದೇಶಗಳು ಸಾಮಾನ್ಯವಾಗಿ ಭಾಷೆ ಮತ್ತು ವಾಕ್ಯ ರಚನೆಯ ವಿಷಯದಲ್ಲಿ ಸ್ಪಷ್ಟವಾಗಿರುತ್ತದೆ. ಸಂದೇಶವನ್ನು ನಂಬಲರ್ಹವಲ್ಲದ ಮೂಲದಿಂದ ಬರೆಯಲಾಗಿದೆ ಎಂಬುದಕ್ಕೆ ಇದು ಅತ್ಯಂತ ಸ್ಪಷ್ಟವಾದ ಸಂಕೇತವಾಗಿರುತ್ತದೆ.
ಲಿಂಕ್ ಅನ್ನು ಕ್ಲಿಕ್ ಮಾಡಲು ಕೇಳುವ ಯಾವುದೇ ಸಂದೇಶವನ್ನು ನೀವು ಎಚ್ಚರಿಕೆಯಿಂದ ನೋಡಬೇಕು. ಲಿಂಕ್ ಸ್ವತಃ ಅಧಿಕೃತವಲ್ಲದ ಮೂಲದಿಂದ ಬಂದಿದ್ದರೆ ಅದರ ಮೇಲೆ ಕ್ಲಿಕ್ ಮಾಡುವುದನ್ನು ನೀವು ತಡೆಯಲೇ ಬೇಕು. ಅದೇ ರೀತಿ ನೀವು ಇತರರಿಗೂ ಮಾಡಲು ಹೇಳಿ. ಕೆಲವು ಬಾರಿ ಸರಳವಾಗಿ ನೀವು ಗೂಗಲ್ ಸರ್ಚ್ ಮಾಡಿದರೆ ಸಾಕು. ಈ ಸಂದೇಶ ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ