ನವದೆಹಲಿ: ತನ್ನ ಮಳಿಗೆಯಲ್ಲಿ 10 ರೂ. ಮೌಲ್ಯದ ಮೊಬೈಲ್ ಬಿಡಿಭಾಗಗಳನ್ನು ಖರೀದಿಸಿದರೆ ಉಚಿತವಾಗಿ ನಿಂಬೆಹಣ್ಣು ಹಾಗೂ ಪೆಟ್ರೋಲ್ ನೀಡುವುದಾಗಿ ವಾರಣಾಸಿಯ ಮಳಿಗೆದಾರರೊಬ್ಬರು ಘೋಷಿಸಿದ್ದಾರೆ.
ಇತ್ತೀಚೆಗೆ ಪೆಟ್ರೋಲ್ ಹಾಗೂ ನಿಂಬೆಹಣ್ಣಿನ ದರ ಏಕಾ-ಏಕಿ ಏರಿಕೆಯಾಗಿದ್ದು, ಗ್ರಾಹಕರಿಗೆ ಹೊರೆಯಾಗುತ್ತಿರುವುದರಿಂದ ಈ ಆಫರ್‌ಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಸಾಧಾರಣಾ ಮೊತ್ತಕ್ಕೆ ಮೊಬೈಲ್ ಬಿಡಿ ಭಾಗಗಳನ್ನು ಖರೀದಿಸಿದ್ರೆ 2 ರಿಂದ 4 ನಿಂಬೆಹಣ್ಣುಗಳನ್ನು ಹಾಗೂ 10,000 ರೂ. ಮೌಲ್ಯಕ್ಕೆ ಖರೀದಿಸಿದರೆ ಉಚಿತವಾಗಿ ಪೆಟ್ರೋಲ್ ನೀಡುವುದಾಗಿಯೂ ಮೊಬೈಲ್ ಮಳಿಗೆ ಮಾಲೀಕ ಹೇಳಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: 30 ಲಕ್ಷದ ಚಿನ್ನವನ್ನು ಗುದನಾಳ, ವಿಗ್‌ನಲ್ಲಿ ಬಚ್ಚಿಟ್ಟುಕೊಂಡಿದ್ದ ಕಿಲಾಡಿ ಕಳ್ಳನ ಬಂಧನ
Advertisement
Advertisement
ಕೆಲದಿನಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 105.41 ರೂ., ಮುಂಬೈನಲ್ಲಿ 120.51 ರೂ.ಗೆ ಮಾರಾಟವಾಗುತ್ತಿದೆ. ಐಒಸಿ ಮತ್ತು ಬಿಪಿಸಿಎಲ್ ನಂತಹ ರಾಜ್ಯದ ಚಿಲ್ಲರೆ ವ್ಯಾಪಾರಿಗಳು ಚುನಾವಣಾ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಡೆಹಿಡಿಯಲು ಸುಮಾರು 25 ಶತಕೋಟಿ ಡಾಲರ್ (19,000 ಕೋಟಿ) ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್ ಹೇಳಿದೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ
Advertisement
Advertisement
ನಿಂಬೆಹಣ್ಣು ಕೂಡ ಸಾಮಾನ್ಯರ ಜೇಬಿಗೆ ಭಾರವಾಗಿದೆ. ವಿವಿಧ ನಗರಗಳಲ್ಲಿ ಪ್ರತಿ ಕೆ.ಜಿ ನಿಂಬೆಹಣ್ಣು 400 ರೂ.ಗೆ ತಲುಪಿದೆ. ದೆಹಲಿಯಲ್ಲೂ 350 ರಿಂದ 400 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನ ಎಪಿಎಂಸಿನಲ್ಲೂ ಹೋಸೆಲ್ ದರ 192 ಇದ್ದು, ರಿಟೇಲ್ ದರ 300 ರಿಂದ 350 ರೂ.ಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.