ಬಡವರಿಗೆ ಮನೆ, ಅನಾಥಾಶ್ರಮಗಳಿಗೆ ಮಧ್ಯಾಹ್ನದ ಭೋಜನ – ಇದು ದಿನಗೂಲಿ ನೌಕರರಿಂದಲೇ ರಚನೆಯಾದ ಟ್ರಸ್ಟ್‌

Public TV
1 Min Read
raja kesari trust belthangady Social Service 1

– ಬೆಳ್ತಂಗಡಿಯ ರಾಜ ಕೇಸರಿ ಟ್ರಸ್ಟ್‌ನಿಂದ ಸಮಾಜ ಸೇವೆ

ಬೆಂಗಳೂರು: ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಬೆಳ್ತಂಗಡಿಯ ರಾಜ ಕೇಸರಿ ಟ್ರಸ್ಟ್‌ (Raja Kesari Trust Belthangady) ಒಂದು ಉತ್ತಮ ಉದಾಹರಣೆ.

ಬಡವರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬ ಕಾರಣಕ್ಕೆ ದಿನಗೂಲಿ ನೌಕರರಿಂದಲೇ ರಾಜ ಕೇಸರಿ ಟ್ರಸ್ಟ್‌ ರಚನೆಯಾಗಿದೆ. 2012 ರಲ್ಲಿ ಆರಂಭಗೊಂಡ ಟ್ರಸ್ಟ್‌ ಇಲ್ಲಿಯವರೆಗೆ 2 ಕೋಟಿಗೂ ಅಧಿಕ ಮೊತ್ತದ ಸೇವಾ ಚಟುವಟಿಕೆಯನ್ನು (Social Service) ರೂಪಿಸಿದೆ. ಇದನ್ನೂ ಓದಿ: ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದ ಅನುಶ್ರೀ

raja kesari trust belthangady Social Service 3

ತುಳುನಾಡಿನ ದೈವ ದೇವರ ಆಶೀರ್ವಾದದಿಂದ ಕಡುಬಡವರಿಗೆ ಸೇವೆ ಉದ್ದೇಶದಿಂದ ದೀಪಕ್‌.ಜಿ ಅವರು ಈ ಟ್ರಸ್ಟ್‌ ಆರಂಭಿಸಿದ್ದಾರೆ. ಚಾಲಕರು, ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರು ಸೇರಿದಂತೆ ದಿನಗೂಲಿ ನೌಕರರು ಈ ಟ್ರಸ್ಟ್‌ ಸದಸ್ಯರಾಗಿದ್ದಾರೆ.

ಟ್ರಸ್ಟ್‌ ಏನು ಕೆಲಸ ಮಾಡಿದೆ?
ಸಂಘಟನೆಯಿಂದ 34 ಮನೆಗಳನ್ನು ನಿರ್ಮಾಣ ಮಾಡಿದ್ದು, ತುರ್ತು ಸಂದರ್ಭದಲ್ಲಿ 12 ಸಾವಿರಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದ್ದಾರೆ. ಕೋವಿಡ್‌ ಸಮಯದಲ್ಲಿ ಆಹಾರ ಕಿಟ್‌ ವಿತರಣೆ, ಕೊರೊನಾ ಸಮಯದಲ್ಲಿ ಮೃತಪಟ್ಟ 85 ವ್ಯಕ್ತಿಗಳ ಶವ ಸಂಸ್ಕಾರ ಮಾಡಲಾಗಿದೆ.

raja kesari trust belthangady Social Service 4

ಎಂಡೋಸಲ್ಫಾನ್ ಮತ್ತು ಅಂಗವಿಕಲರ ವ್ಯಕ್ತಿಗಳಿಗೆ 21 ವೀಲ್‌ ಚೇರ್‌ ಹಸ್ತಾಂತರ, ಮುಕ್ತಿ ಧಾಮಕ್ಕೆ ಕಟ್ಟಿಗೆ ವ್ಯವಸ್ಥೆ. ಅಶಕ್ತ ಕುಟುಂಬಗಳಿಗೆ ಟೈಲರಿಂಗ್‌ ಯಂತ್ರವನ್ನು ಹಸ್ತಾಂತರಿಸಲಾಗಿದೆ.

ಇಷ್ಟೇ ಅಲ್ಲದೇ ಅನಾಥಾಶ್ರಮಗಳಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ, ಗ್ರಾಮಾಂತರ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುತ್ತಿದೆ. ಅಂಗವಿಕಲರ ಕಲ್ಯಾಣ ಕಾರ್ಯಕ್ರಮ. ಕ್ರೀಡೆ, ಕಲೆ, ಸಂಸ್ಕೃತಿ ಬಗ್ಗೆ ಜಾಗೃತಿ, ಶಿಕ್ಷಣಕ್ಕೆ ಪ್ರೋತ್ಸಾಹ, ಶ್ರಮದಾನ ಕಾರ್ಯಕ್ರಮವನ್ನು ಆಯೋಜಿಸಿದೆ.

raja kesari trust belthangady Social Service 2

ಬಸ್ಸು ತಂಗುದಾಣದಲ್ಲಿ ನೀರಿನ ಬಾಟಲಿಯನ್ನು ಮಾರಿ ಅಶಕಕ್ತರಿಗೆ ಆರ್ಥಿಕ ನೆರವು ನೀಡಿತ್ತಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ, ಆಶ್ರಮಗಳಿಗೆ ವಿಶೇಷ ಯೋಜನೆ, ನ್ಯಾಯ ಬೆಲೆ ಅಂಗಡಿಯಲ್ಲಿ ಸ್ವಯಂ ಸೇವಕರಾಗಿ ಟ್ರಸ್ಟ್‌ ಸದಸ್ಯರು ಕೆಲಸ ನಿರ್ವಹಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *