ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಹಾಗೂ ಪೀಪಲ್ ಟ್ರೀ ಹಾಸ್ಪಿಟಲ್ (People Tree Hospital) ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಪಬ್ಲಿಕ್ ಟಿವಿ ಕಚೇರಿಯಲ್ಲಿ ನಡೆಯಿತು.
ರೈಟ್ ಮೆನ್ ಮೀಡಿಯಾ ಸಮೂಹದ ಪಬ್ಲಿಕ್ ಟಿವಿ, ಪಬ್ಲಿಕ್ ಮ್ಯೂಸಿಕ್ ಹಾಗೂ ಪಬ್ಲಿಕ್ ಮೂವೀಸ್, ಪಬ್ಲಿಕ್ ಟಿವಿ ಡಿಜಿಟಲ್ ವಿಭಾಗದ ಸಿಬ್ಬಂದಿಗೆ ಈ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಇಸಿಜಿ, ಬಿಪಿ, ಮಧುಮೇಹ ಸೇರಿ ವಿವಿಧ ಮೆಡಿಕಲ್ ಚೆಕ್ ಅಪ್ ಕೂಡಾ ನಡೆಯಿತು.
ಇದೇ ಶಿಬಿರದಲ್ಲಿ ವಿಜಯನಗರದ ಲಯನ್ಸ್ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ (Blood Donate) ಹಾಗೂ ಕಣ್ಣಿನ ತಪಾಸಣೆ (Eye Test) ಏರ್ಪಡಿಸಲಾಗಿತ್ತು.
ಪಬ್ಲಿಕ್ ಟಿವಿಯ ಸಿಇಒ ಅರುಣ್ ಕುಮಾರ್, ಮಾನವ ಸಂಪನ್ಮೂಲ ವಿಭಾಗದ ಕೆ.ಎಸ್.ಶಂಕರ್, ಬೆಂಗಳೂರಿನ ಗೊರಗುಂಟೆಪಾಳ್ಯದ ಪೀಪಲ್ ಟ್ರೀ ಹಾಸ್ಪಿಟಲ್ ವೈದ್ಯರಾದ ಡಾ.ಜ್ಯೋತಿ ನೀರಜಾ, ಮಾರ್ಕೆಟಿಂಗ್ ಮ್ಯಾನೇಜರ್ ಬಸವರಾಜ್ ಪಾಸೋಡಿ, ಲಯನ್ಸ್ ಕ್ಲಬ್ ವತಿಯಿಂದ ಮನೋಜ್ ಕುಮಾರ್ ಉಸ್ತುವಾರಿ ವಹಿಸಿದ್ದರು.