ಲಕ್ನೋ: ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಭಾರತದ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ಭೇಟಿಗೆ 3 ದಿನಗಳ ಉಚಿತ ಪ್ರವೇಶ ಘೋಷಿಸಲಾಗಿದೆ.
ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ) ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದೆ. ಈ 3 ದಿನ ತಾಜ್ ಮಹಲ್‌ನಲ್ಲಿ ಷಹಜಹಾನ್‌ನ ಉರ್ಸ್ ಆಚರಿಸಲಾಗುವುದು. ಹೀಗಾಗಿ ಈ 3 ದಿನಗಳಲ್ಲಿ ಪ್ರವಾಸಿಗರು ವಿನಾಯಿತಿ ಪಡೆಯಲಿದ್ದಾರೆ ಎಂದು ತಿಳಿಸಿದೆ.
Advertisement
Advertisement
ಪ್ರತಿ ವರ್ಷ ಉರುಸ್ ಆಚರಣೆ ಸಂದರ್ಭದಲ್ಲಿ ಈ ವಿನಾಯಿತಿಯನ್ನು ನೀಡಲಾಗುತ್ತದೆ. ಇದರೊಂದಿಗೆ ವಿಶ್ವ ಪ್ರವಾಸೋದ್ಯಮ ದಿನದಂದು ಕೂಡಾ ತಾಜ್ ಮಹಲ್‌ನಲ್ಲಿ ಪ್ರವೇಶ ಉಚಿತವಾಗಿದೆ. ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ – PSI ನೇಮಕಾತಿಗೆ ತಡೆ: ಆರಗ ಜ್ಞಾನೇಂದ್ರ
Advertisement
ತಾಜ್ ಮಹಲ್‌ನಲ್ಲಿ ಮುಮ್ತಾಜ್ ಮಹಲ್‌ನ ಸಮಾಧಿ ಇದೆ. ಷಹಜಹಾನ್‌ನನ್ನು ಅವನ ಪತ್ನಿಯೊಂದಿಗೆ ಸಮಾಧಿ ಮಾಡಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಅನುಮತಿಗೆ ಅನುಗುಣವಾಗಿ ಪ್ರತಿ ವರ್ಷ ಚಕ್ರವರ್ತಿಯ ಷಹಜಹಾನ್ ಮೃತಪಟ್ಟ ದಿನದಂದು ಇಲ್ಲಿ ಉರುಸ್ ನಡೆಯುತ್ತದೆ
Advertisement
ಫೆಬ್ರವರಿ 27ರಂದು ಷಹಜಹಾನ್‌ನ ಉರುಸ್ ಮೊದಲ ದಿನ. ಅಂದು ಮಧ್ಯಾಹ್ನ 2 ಗಂಟೆಯಿAದ ಸೂರ್ಯಾಸ್ತದ ವರೆಗೆ ಎಲ್ಲಾ ಪ್ರವಾಸಿಗರಿಗೂ ಉಚಿತ ಪ್ರವೇಶ ಇರಲಿದೆ. ಫೆಬ್ರವರಿ 28 ರಂದು ಹಿಂದಿನ ದಿನದ ವೇಳಾಪಟ್ಟಿ ಅನುಸರಿಸಲಾಗುತ್ತದೆ. ಮಾರ್ಚ್ 1 ಉರುಸ್ ಕೊನೆಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಉಚಿತ ಪ್ರವೇಶ ಇರಲಿದೆ ಎಂದು ಎಎಸ್‌ಐನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಡಾ. ರಾಜ್‌ಕುಮಾರ್ ಪಟೇಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಲಾಯಂ ಸಿಂಗ್ ಯಾದವ್ ಮನಃಪೂರ್ವಕವಾಗಿ ಸಮಾಜವಾದಿ ಪಕ್ಷದೊಂದಿಗಿಲ್ಲ: ಬಿಜೆಪಿ
ಷಹಜಹಾನ್‌ನ 3 ದಿನಗಳ ಉರುಸ್ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಇರಲಿದೆ. ಹೀಗಾಗಿ ತಾಜ್ ಮಹಲ್‌ನ ಭದ್ರತಾ ವ್ಯವಸ್ಥೆ ಬಲಪಡಿಸಲಾಗುತ್ತದೆ. ಉಚಿತ ಪ್ರವೇಶ ಪಡೆಯುವ ಪ್ರವಾಸಿಗರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.