ಬೆಂಗಳೂರು: ನಗರದ ಹೆರಿಗೆ ಆಸ್ಪತ್ರೆಗಳಲ್ಲಿ ಹೆರಿಗೆ ಚಿಕಿತ್ಸೆಗೆ ಬರುವಂತಹ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಕೆಲವು ಕಡೆ ಹೆರಿಗೆ ಆಸ್ಪತ್ರೆಗಳಲ್ಲಿ ಸುಸಜ್ಜಿತವಾದ ಸೌಲಭ್ಯವಿದ್ದರೆ, ಇನ್ನೂ ಕೆಲವೆಡೆ ಚಿಕಿತ್ಸೆಗೆಂದು ಸರಿಯಾದ ಸೌಲಭ್ಯ ಕೂಡ ಇರುವುದಿಲ್ಲ. ಹೀಗಾಗಿ ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳಿಗೆ ಒಂದೊಂದೇ ಸೌಲಭ್ಯಗಳನ್ನು ಒದಗಿಸುತ್ತಾ ಬರುತ್ತಾ ಇದೆ. ಹೆರಿಗೆ ಚಿಕಿತ್ಸೆಗೆ ಬರುವಂತಹ ರೋಗಿಗಳ ಅನುಕೂಲಕ್ಕಾಗಿ ಉಚಿತವಾಗಿ ದಂತ ಚಿಕಿತ್ಸೆ ಕೊಡಿಸಲು ಬಿಬಿಎಂಪಿ ಮುಂದಾಗಿದೆ.
Advertisement
ಖಾಸಗಿ ಸಹಭಾಗಿತ್ವದಲ್ಲಿ ಈ ಸೌಲಭ್ಯ ನೀಡ್ತಾ ಇದ್ದು, ಈಗಾಗಲೇ ಇದರ ಸೌಲಭ್ಯವನ್ನು ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳು ಪಡೆಯುತ್ತಾ ಇದ್ದಾರೆ. ಉಚಿತ ಚಿಕಿತ್ಸೆ ನೀಡುವ ಖಾಸಗಿ ವೈದ್ಯರ ಕನ್ಸಲ್ಟೆನ್ಸಿ ಮೊತ್ತವನ್ನು ಬಿಬಿಎಂಪಿಯೇ ಭರಿಸಲಿದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ ಗಂಗಾನಗರ ಹೆರಿಗೆ ಆಸ್ಪತ್ರೆ, ಎನ್.ಆರ್ ಕಾಲೋನಿ ಹೆರಿಗೆ ಆಸ್ಪತ್ರೆ, ಶಾಂತಿನಗರ ಹೆರಿಗೆ ಆಸ್ಪತ್ರೆ ಮತ್ತು ಪೊಬ್ಬತ್ತಿ ಹೆರಿಗೆ ಆಸ್ಪತ್ರೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಉಚಿತ ಚಿಕಿತ್ಸಾ ಸೇವೆಯನ್ನು ಒದಗಿಸಲಾಗುತ್ತಿದೆ.
Advertisement
Advertisement
ಸಾಂಕ್ರಾಮಿಕ ಕಾಯಿಲೆಗಳಿಗೆ ಪ್ರತಿ ಆಸ್ಪತ್ರೆಯಲ್ಲಿ ಮಾತ್ರೆಗಳು ಲಭ್ಯವಿರುತ್ತವೆ. ದಂತ ಚಿಕಿತ್ಸೆಗೆ ಯಾವುದೇ ರೀತಿಯ ಸೌಲಭ್ಯ ಮತ್ತು ಔಷಧಿ ಇರುವುದಿಲ್ಲ. ಹೀಗಾಗಿ ಬೆಂಗಳೂರಿನ ಪ್ರತಿ ಹೆರಿಗೆ ಆಸ್ಪತ್ರೆ ಉಚಿತವಾಗಿ ದಂತ ಚಿಕಿತ್ಸೆಯನ್ನ ನೀಡುತ್ತಾ ಇದ್ದು, ಸಾರ್ವಜನಿಕರು ಇದನ್ನ ಸದುಪಯೋಗ ಪಡಿಸಿಕೊಂಡರೆ ಉತ್ತಮ ಎಂದು ಬಿಬಿಎಂಪಿ ತಿಳಿಸಿದೆ.
Advertisement