ಬೆಂಗಳೂರು: ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಶುಕ್ರವಾರದಿಂದ ಬೂಸ್ಟರ್ ಡೋಸ್ ಆಗಿ ಕೋರ್ಬೆವ್ಯಾಕ್ಸ್ ಲಸಿಕೆ ಸಿಗಲಿದೆ.
ನಾಳೆಯಿಂದ ಮುನ್ನೆಚ್ಚರಿಕಾ ಡೋಸ್ ಆಗಿ ಕೋರ್ಬೆವ್ಯಾಕ್ಸ್ ಲಸಿಕೆ ನೀಡಲಾಗುವುದು. ಎಲ್ಲಾ ಸರ್ಕಾರಿ ಆಸ್ಫತ್ರೆಗಳಲ್ಲಿ ಉಚಿತವಾಗಿ ಲಸಿಕೆ ಸಿಗಲಿದೆ. ಇದನ್ನೂ ಓದಿ: ಆಗಸ್ಟ್ 12 ರಿಂದ ಕೋವಿಡ್ ಬೂಸ್ಟರ್ ಆಗಿ ವಯಸ್ಕರಿಗೆ ಸಿಗಲಿದೆ ಕಾರ್ಬೆವಾಕ್ಸ್
Advertisement
Advertisement
ಕೋರ್ಬೆವ್ಯಾಕ್ಸ್ ಲಸಿಕಾಕರಣಕ್ಕೆ ಸಚಿವ ಸುಧಾಕರ್ ಅವರು ನಾಳೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇಷ್ಟು ದಿನ ಮುನ್ನೆಚ್ಚರಿಕಾ ಡೋಸ್ ಆಗಿ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿತ್ತು. ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಜೊತೆಗೆ ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಮುನ್ನೆಚ್ಚರಿಕಾ ಡೋಸ್ ಪಡೆಯಬಹುದು.
Advertisement
ಕೊರೊನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ, ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ 2 ಡೋಸ್ ಪಡೆದ ವಯಸ್ಕರಿಗೆ ಸರ್ಕಾರ ಜೈವಿಕ ಇ ಕೋರ್ಬೆವ್ಯಾಕ್ಸ್ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದು ಆಗಸ್ಟ್ 12 ರಿಂದ ಜಾರಿಗೆ ಬರಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯು.ಎಸ್ ಚಾರ್ಜೆ ಡಿ ಅಫೇರ್ಸ್ ಪೆಟ್ರೀಷಿಯಾ ಲಸಿನಾ
Advertisement
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ 2 ಡೋಸ್ ಪಡೆದು 6 ಅಥವಾ 26 ವಾರಗಳಾಗಿದ್ದರೆ, ಬೂಸ್ಟರ್ ಡೋಸ್ ಆಗಿ ಕೋರ್ಬೆವ್ಯಾಕ್ಸ್ ನೀಡಲು ಅನುಮೋದಿಸಿದೆ.