ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ಶಕ್ತಿ ಯೋಜನೆ (Shakti Scheme) ಜಾರಿಯಾದ ಎರಡನೇ ವಿಕೇಂಡ್‌ನಲ್ಲೂ ಮಹಿಳೆಯರ ಪ್ರಯಾಣ ಮತ್ತಷ್ಟು ಹೆಚ್ಚಾಗಿದೆ. ವೀಕೆಂಡ್ ಸಂದರ್ಭದಲ್ಲಿ ಮಹಿಳೆಯರು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚೆಚ್ಚು ಪ್ರಯಾಣ ಮಾಡುತ್ತಿದ್ದಾರೆ.
ಶನಿವಾರ ಕೂಡ 58,14,524 ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದರು. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಶನಿವಾರ 54,30,150 ಮಹಿಳೆಯರು ಪ್ರಯಾಣ ಮಾಡಿದ್ದರು. ಇದನ್ನೂ ಓದಿ: ವೋಲ್ವೋ ಬಸ್‌ಗಳಿಗೆ ‘ಶಕ್ತಿ’ ತುಂಬಿದ ಪುರುಷರು
Advertisement
Advertisement
ನಿನ್ನೆ ಮಹಿಳಾ ಪ್ರಯಾಣಿಕರ ಸಂಖ್ಯೆ 58 ಲಕ್ಷ ದಾಟಿದೆ. ಯಾವ ಬಸ್‌ಗಳಲ್ಲಿ ಎಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂಬ ಬಗ್ಗೆ ವಿವರ ಇಲ್ಲಿದೆ.
Advertisement
KSRTC ಬಸ್‌ಗಳಲ್ಲಿ ಒಟ್ಟು 17,29,314 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣಿಕರ ಟಿಕೆಟ್ ಮೌಲ್ಯ 4,92,92,066 ರೂ. ಆಗಿದೆ. ಹಾಗೆಯೇ BMTC ಬಸ್‌ಗಳಲ್ಲಿ 18,95,144 ಮಹಿಳೆಯರು ಪ್ರಯಾಣಿಸಿದ್ದಾರೆ. ಇವರ ಪ್ರಯಾಣದ ಟಿಕೆಟ್ ಮೌಲ್ಯ 2,41,94,354 ರೂ. ಆಗಿದೆ. ಇದನ್ನೂ ಓದಿ: 2ನೇ ವೀಕೆಂಡ್ – ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ ಖಾಲಿ, ಖಾಲಿ
Advertisement
NWRTC ಬಸ್‌ಗಳಲ್ಲಿ 14,01,910 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಪ್ರಯಾಣಿಕರ ಟಿಕೆಟ್ ಮೌಲ್ಯ 3,50,40,233 ರೂ. ಆಗಿದೆ. ಅಂತೆಯೇ KKRTC ಬಸ್‌ಗಳಲ್ಲಿ ಒಟ್ಟು 7,88,156 ಮಹಿಳೆಯರು ಪ್ರಯಾಣ ಮಾಡಿದ್ದು, ಟಿಕೆಟ್ ಮೌಲ್ಯ 2,55,94,985 ಆಗಿದೆ.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ಅಂದರೆ, ಜೂನ್ 11 ರಿಂದ ಜೂನ್ 24 ರವರೆಗೆ ನಾಲ್ಕು ನಿಗಮದ ಬಸ್‌ಗಳಲ್ಲಿ ಓಡಾಟ ನಡೆಸಿದ ಮಹಿಳೆಯರ ಸಂಖ್ಯೆ 7,15,58,775 ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ. ಈ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 166,09,27,526 ರೂ. ತಲುಪಿದೆ. ಇದನ್ನೂ ಓದಿ: ಗೃಹಲಕ್ಷ್ಮಿಯನ್ನ ನಾನೇ ಹೋಲ್ಡ್ ಮಾಡಿಸಿದ್ದೇನೆ – ಡಿಸಿಎಂ ಡಿಕೆಶಿ