ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ದ 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇವತ್ತು ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಲಿದ್ದಾರೆ. ಮೊದಲ ಬಾರಿಗೆ ಮಹಿಳೆಯರಿಗೆ ರಾಜ್ಯಾದ್ಯಂತ ಬಸ್ ಫ್ರೀ ಜೊತೆಗೆ ಒಂದಷ್ಟು ಕಿರಿಕ್ ಗಳು ನಡೆಯೋ ಸಾಧ್ಯತೆ ಕೂಡ ಇದೆ. ಇದಕ್ಕೆ ಪೊಲೀಸ್ ಇಲಾಖೆ (Police Department) ಕೂಡ ಮುಂಜಾಗ್ರತೆ ಕ್ರಮ ಕೈಗೊಂಡಿದೆ.
Advertisement
ಹೌದು. ಇಂದಿನಿಂದ ರಾಜ್ಯಾದ್ಯಂತ ಮಹಿಳೆಯರು ಫ್ರೀ ಆಗಿ ಓಡಾಡೋಕೆ ಖುಷಿಯಿಂದ ಕಾತರರಾಗಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಸಿಎಂ ಸಿದ್ದರಾಮಯ್ಯ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆದರೆ ಮಹಿಳೆಯರ ಫ್ರೀ ಬಸ್ ಪ್ರಯಾಣಕ್ಕೆ ವೋಟರ್ ಐಡಿ, ರೇಷನ್ ಕಾರ್ಡ್ ಹಾಗೂ ಅಧಾರ್ ಕಾರ್ಡ್ (Adhar card) ಸೇರಿದಂತೆ ಯಾವುದಾರು ಒಂದು ದಾಖಲೆ ಇಟ್ಟುಕೊಳ್ಳಬೇಕಿದೆ. ಹಾಗಾಗಿ ಈ ವಿಚಾರದಲ್ಲಿ ಪ್ರಯಾಣಿಕರು ಮತ್ತು ಬಸ್ ಸಿಬ್ಬಂದಿ ನಡುವೆ ಕಿರಿಕ್ ಆಗೋ ಸಾಧ್ಯತೆಗಳಿವೆ. ಈ ಹಿನ್ನೆಲೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.
Advertisement
ಬೆಂಗಳೂರಿನದ್ಯಂತ ಸುಮಾರು ಎರಡು ಸಾವಿರ ಹೋಮ್ ಗಾರ್ಡ್‍ಗಳನ್ನು ನಿಯೋಜನೆ ಮಾಡಿದ್ದು, ಪ್ರತಿ ಬಸ್‍ನಲ್ಲಿ ಇಬ್ಬರು ಹೋಮ್ ಗಾಡ್ರ್ಸ್, ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಹೋಮ್ ಗಾರ್ಡ್‍ಗಳ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು – ಸಿಎಂ ಪ್ರಶ್ನೆ
Advertisement
Advertisement
ಪ್ರಯಾಣಿಕರು ಹಾಗೂ ಸಿಬ್ಬಂದಿ ನಡುವೆ ಯಾವುದೇ ಗಲಾಟೆಗಳು, ಗೊಂದಲಗಳು ನಡೆಯದಂತೆ ಎಚ್ಚರಿಕೆ ವಹಿಸಲು ಬೆಂಗಳೂರು ಪೊಲೀಸ್ ಕಮಿಷನರ್ ಸಂಬಂಧಪಟ್ಟ ಡಿವಿಜನ್‍ಗಳ ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಪ್ರತಿ ಡಿವಿಜನ್‍ಗೆ 350 ಹೋಮ್ ಗಾರ್ಡ್‍ಗಳಂತೆ 8 ಡಿವಿಷನ್‍ಗಳಲ್ಲಿ 2 ಸಾವಿರ ಹೋಮ್‍ಗಳನ್ನು ಭದ್ರೆತೆ ನಿಯೋಜನೆ ಮಾಡಲಾಗಿದೆ. ಪೊಲೀಸರು ಕೂಡ ಸಾಥ್ ನೀಡಲಿದ್ದು, ಬಸ್ ನಿಲ್ದಾಣಗಳು, ಮತ್ತು ರಸ್ತೆಗಳಲ್ಲಿ ಹೆಚ್ಚಿನ ಗಸ್ತು ತಿರುಗಲಿದ್ದಾರೆ.
ಒಟ್ಟಿನಲ್ಲಿ ಇಂದು 1 ಗಂಟೆ ನಂತರ ಮಹಿಳೆಯರು ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್‍ಗಳಲ್ಲಿ ಉಚಿತವಾಗಿ ಓಡಾಡಬಹುದಾಗಿದೆ. ಯಾವುದೇ ಗೊಂದಲ, ಗಲಾಟೆಗಳು ಆಗದಂತೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.