ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ (Free bus Ticket) ಪಯಣಕ್ಕೆ ಅವಕಾಶ ನೀಡಿರುವ ಶಕ್ತಿ ಯೋಜನೆಯಿಂದ ಅನುಕೂಲಗಳ ಜೊತೆ ನಾನಾ ಸಮಸ್ಯೆಗಳು ಸೃಷ್ಟಿಯಾಗ್ತಿವೆ.
ಬಹುತೇಕ ಮಹಿಳೆಯರು ಸರ್ಕಾರಿ ಬಸ್‍ಗಳನ್ನೇ ಆಶ್ರಯಿಸಿರುವ ಕಾರಣ ಎಲ್ಲಾ ಕಡೆ ಬಸ್‍ಗಳು ಫುಲ್ ರಶ್ ಆಗ್ತಿವೆ. ಎಷ್ಟರ ಮಟ್ಟಿಗೆ ಅಂದ್ರೆ ಕೆಲವೊಂದು ರೂಟ್‍ಗಳಲ್ಲಿ ಹಲವು ಹಳ್ಳಿಗಳಲ್ಲಿ ನಿಲುಗಡೆ ಮಾಡದಿರುವ ಮಟ್ಟಿಗೆ ರಶ್ ಆಗ್ತಿವೆ. ಸಾರಿಗೆ ಸಿಬ್ಬಂದಿಗೆ ಬಸ್ ನಿಲ್ಲಿಸುವಂತೆಯೂ ಇಲ್ಲ, ನಿಲ್ಲಿಸದೇ ಇರುವಂತೆಯೂ ಇಲ್ಲ. ಒಟ್ಟಿನಲ್ಲಿ ಜನಾಕ್ರೋಶಕ್ಕೆ ತುತ್ತಾಗ್ತಿದ್ದಾರೆ.
Advertisement
Advertisement
ಗುರುವಾರ ಕೊರಟಗೆರೆಯ ಗೊರವನಹಳ್ಳಿ ಗೇಟ್‍ನಲ್ಲಿ ಬಸ್ ತಡೆಯಲು ಮುಂದಾದ ಮಹಿಳೆಯರ ಮೇಲೆಯೇ ಚಾಲಕನೊಬ್ಬ ಹತ್ತಿಸಲು ನೋಡಿದ್ದಾನೆ. ಅದೃಷ್ಟವಶಾತ್ ಮಹಿಳೆಯರು ಎಚ್ಚೆತ್ತ ಕಾರಣ ಸಾವು-ನೋವು ತಪ್ಪಿದೆ. ಕಲೆಕ್ಷನ್ ಆಗಲ್ಲ, ಅನ್ನೋ ಕಾರಣಕ್ಕೆ ಬಸ್ ನಿಲ್ಲಿಸದೇ ಹೋಗ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಕುಸ್ತಿಪಟುಗಳ ಪ್ರಕರಣದಲ್ಲಿ ಪ್ರಧಾನಿ ಮೋದಿ ಕೂಡ ಶಿಕ್ಷಾರ್ಹ : ನಟ ಕಿಶೋರ್
Advertisement
Advertisement
ಕೊನೆಗೆ ತಹಶೀಲ್ದಾರ್ (Tehshildar) ಆಗಮಿಸಿ ಕೊಳ್ಳೆಗಾಲ ಮೂಲದ ಮಹಿಳೆಯರನ್ನು ಬಸ್ ಹತ್ತಿಸಿ ಕಳಿಸಿದ್ದಾರೆ. ಸಾರಿಗೆ ಸಿಬ್ಬಂದಿ ವರ್ತನೆಗೆ ಆಕ್ರೋಶವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಮಂತ್ರಿಗಳು, ವರದಿ ತರಿಸಿಕೊಂಡು, ತಪ್ಪು ಕಂಡುಬಂದ್ರೆ ಕ್ರಮ ತಗೋತೀವಿ ಎಂಬ ಭರವಸೆ ನೀಡಿದ್ದಾರೆ.