ಬೆಂಗಳೂರು: ರಾಜ್ಯದಲ್ಲಿನ ಎಲ್ಲ ರಕ್ತ ನಿಧಿ ಕೇಂದ್ರಗಳಲ್ಲಿನ ರಕ್ತ ಮತ್ತು ಅದರ ಅಂಗಾಂಶಗಳ ಪರಿಷ್ಕೃತ ಸೇವಾ ಶುಲ್ಕವನ್ನು ನಿಗದಿಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
Advertisement
ಅದರಂತೆ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಹಾಗೂ ಸರ್ಕಾರೇತರ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಮತ್ತು ಅಂಗಾಂಶಗಳ ಪರಿಷ್ಕೃತ ಸೇವಾ ಶುಲ್ಕ ನಿಗದಿಯಂತೆ ಜಾರಿಗೆ ಬರಲಿದೆ. ಇನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ರಕ್ತ ಉಚಿತವಾಗಿ ಸಿಗಲಿದ್ದು, ಉಳಿದ ಕುಟುಂಬಗಳು ರಕ್ತ ಪಡೆಯಲು ನಿಗದಿಯಾದ ಶುಲ್ಕವನ್ನು ಪಾವತಿಸಬೇಕಿದೆ.
Advertisement
Advertisement
ದುಬಾರಿ ರಕ್ತ: ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರೇತರ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದ ಜೊತೆಗೆ ರಕ್ತದ ಅಂಗಾಂಶದ(ಬ್ಲಡ್ ಸೆಲ್) ದರ ಹೆಚ್ಚಳಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ದರ ಪರಿಷ್ಕರಣೆ ಮಾಡಿ, ದರ ಪಟ್ಟಿ ಪ್ರದರ್ಶನಕ್ಕೆ ಆದೇಶಿಸಲಾಗಿದೆ.
Advertisement
ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ರಕ್ತ ನೀಡಬೇಕೆಂದು ಸರ್ಕಾರ ಈ ಹಿಂದೆಯೇ ಆದೇಶ ನೀಡಿತ್ತು. ಆದ್ರೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಮಂದಿಯಿಂದ ಹಣ ಪಡೆದುಕೊಳ್ಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಈ ಆದೇಶ ಹೊರಡಿಸಿದೆ.