ಮತಗಳ್ಳತನ ಆರೋಪ ಪಾಲಿಟಿಕ್ಸ್‌ನಲ್ಲೀಗ ಬಿಗ್ ಟ್ವಿಸ್ಟ್. ರಾಹುಲ್ ಗಾಂಧಿಯವರ (Rahul Gandhi) ಮತ ಕಳವು ಆರೋಪದ ವಿರುದ್ಧ ಬಿಜೆಪಿಗೆ (BJP) ಸಿಕ್ಕಿದೆ ಬ್ರಹ್ಮಾಸ್ತ್ರ.
ಹೌದು, ಖುದ್ದು ಸಿದ್ದರಾಮಯ್ಯ (Siddaramaiah) ಅವರೇ, 1991ರ ಕೊಪ್ಪಳ ಲೋಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ತಮಗೆ ಕಾಂಗ್ರೆಸ್ ಅಭ್ಯರ್ಥಿ ಮೋಸದಿಂದ ಸೋಲಿಸಿದ್ದನ್ನು ಹೇಳಿಕೊಂಡಿದ್ದಾರೆ. ಅದಕ್ಕಾಗಿ ಕೈ ಅಭ್ಯರ್ಥಿ ವಿರುದ್ಧವೂ ಕೇಸ್ ಹಾಕಿದ್ದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ನಿನ್ನೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಈಗ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಸೃಷ್ಟಿಸಿದೆ. ಇದನ್ನೇ ಕೇಸರಿ ಪಡೆ ಕಾಂಗ್ರೆಸ್ ವಿರುದ್ಧ ವೋಟ್ ಚೋರಿ ಆರೋಪಕ್ಕೆ ತಿರುಗು ಬಾಣವಾಗಿ ಪ್ರಯೋಗಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ‘ಮತಗಳ್ಳತನ’ ಬಯಲು ಮಾಡಿದ ಸಿದ್ದರಾಮಯ್ಯ; ರಾಜಣ್ಣನಂತೆ ವಜಾ ಮಾಡ್ತೀರಾ – ರಾಗಾಗೆ ಅಶೋಕ್ ಸವಾಲ್
ಈ ಸಂಬಂಧ ಬಿಜೆಪಿ ತನ್ನ ಪಕ್ಷದ ಎಕ್ಸ್ ಖಾತೆಯಲ್ಲಿ ಬಿಹಾರ ಮತ ಅಧಿಕಾರ ಯಾತ್ರೆಯಲ್ಲಿ ಪಾಲ್ಗೊಂಡ ಸಿಎಂಗೆ ಟಾಂಗ್ ಕೊಟ್ಟಿದೆ. ಸಿದ್ದರಾಮಯ್ಯ ಹೇಳಿಕೆಯ ವಿಡಿಯೋ ಪೋಸ್ಟ್ ಮಾಡಿ, ನಿಮ್ಮ ಅಂದಿನ ಸೋಲಿಗೆ ಕಾಂಗ್ರೆಸ್ ಕಾರಣ ಅಂತ ನೀವೇ ಹೇಳಿದ್ದೀರಿ. ಅಲ್ಲಿಗೆ ಕಾಂಗ್ರೆಸ್ ನಿಂದ ವೋಟ್ ಚೋರಿ ಆಗಿದೆ ಅಂತ ನೀವೇ ಒಪ್ಪಿಕೊಂಡಂತೆ ಎಂದು ಬಿಜೆಪಿ ಟಕ್ಕರ್ ನೀಡಿದೆ. ಇದನ್ನೂ ಓದಿ: ಸಂವಿಧಾನ ಬದ್ಧವಾಗಿದ್ದರೆ ಯಾರು ಬೇಕಾದ್ರು ದಸರಾ ಉದ್ಘಾಟನೆ ಮಾಡ್ಬಹುದು: ಯು.ಟಿ.ಖಾದರ್
ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್ ಅನ್ವರಿ ಅವರು ನಿಮ್ಮನ್ನು ಸೋಲಿಸಿದ್ದು ವೋಟ್ ಚೋರಿ ಮೂಲಕ ಎಂಬುದನ್ನು ನೀವೇ ತುಂಬಿದ ಸಭೆಯಲ್ಲಿ ಒಪ್ಪಿಕೊಂಡಿದ್ದೀರಿ. ಈಗ ಅದ್ಯಾವ ಮುಖ ಇಟ್ಟುಕೊಂಡು ಬಿಹಾರದಲ್ಲಿ ಲೂಸರ್ ರಾಹುಲ್ ಗಾಂಧಿ ನಡೆಸುತ್ತಿರುವ ಮತ ಅಧಿಕಾರ ಯಾತ್ರೆಯಲ್ಲಿ ಭಾಗಿಯಾಗುತ್ತೀರಿ ಎಂಬುದನ್ನು ತಿಳಿಸುವಿರಾ? ಎಂದು ಬಿಜೆಪಿ ಕೆಣಕಿದೆ.
ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಕಾಂಗ್ರೆಸ್ ಮತಗಳ್ಳತನ್ನು ಸಿದ್ದರಾಮಯ್ಯ ಅವರೇ ಬಯಲು ಮಾಡಿದ್ದಾರೆ. ಕೆ.ಎನ್ ರಾಜಣ್ಣ ಅವರನ್ನ ಮತಗಳವು ವಿರುದ್ಧ ಮಾತಾಡಿದ್ರು ಅಂತ ವಜಾ ಮಾಡಿದಂತೆ ಸಿದ್ದರಾಮಯ್ಯ ಅವರನ್ನೂ ರಾಹುಲ್ ಗಾಂಧಿ ವಜಾ ಮಾಡುವ ಧೈರ್ಯ ಪ್ರದರ್ಶಿಸ್ತಾರಾ? ಅಂತ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಮ್ಮ ಧರ್ಮದಲ್ಲಿ ಮೂರ್ತಿ ಪೂಜೆ ಶ್ರೇಷ್ಠವಾದದ್ದು: ಬಾನು ಮುಷ್ತಾಕ್‌ರಿಂದ ಸ್ಪಷ್ಟೀಕರಣ ಕೇಳಿದ ಯದುವೀರ್
ದೇಶದಲ್ಲಿ ಮತ ಕಳ್ಳತನ, ಚುನಾವಣಾ ಅಕ್ರಮದಪಿತಾಮಹ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬ ಅನ್ನೋದು ಸಾಬೀತಾಗಿದೆ ಅಂತ ಅಶೋಕ್ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ-ಜೋಧಪುರ್ ನೇರ ರೈಲು ಸಂಚಾರಕ್ಕೆ ಅಸ್ತು – ಟಿಕೆಟ್ ಬುಕಿಂಗ್ ಆರಂಭ