ಸಾಲ ನೀಡುವುದಾಗಿ ಹೇಳಿ ವ್ಯಕ್ತಿಯ ಖಾತೆಯಲ್ಲಿದ್ದ ಹಣ ಲಪಟಾಯಿಸಿದ ವಂಚಕರು

Public TV
1 Min Read
davanagere malebennuru police station

ದಾವಣಗೆರೆ: ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೂ ಮೋಸ ಹೋಗುವವರು ಇದ್ದೇ ಇರುತ್ತಾರೆ. ಲೋನ್ ಆ್ಯಪ್‌ಗಳಿಂದ ಮೋಸ ಹೋಗದಿರಿ ಎಂದು ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಜಾಗೃತರಾಗದೇ, ವಂಚಕರ ಮಾತುಗಳನ್ನು ಕೇಳಿ ತಮ್ಮ ಹಣವನ್ನು (Money) ಕಳೆದುಕೊಳ್ಳುತ್ತಾರೆ.

ಹೀಗೆ 10 ಲಕ್ಷ ರೂ. ಹಣ ಲೋನ್ ನೀಡುವುದಾಗಿ ಹೇಳಿ ನಂಬಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 34 ಸಾವಿರ ರೂ. ವಂಚನೆ (Fraud) ಮಾಡಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರದ ಹಾಲಿವಾಣ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮೌನೇಶ್ವರಪ್ಪ ಎನ್ನುವವರಿಗೆ ಖಾಸಗಿ ಹಣಕಾಸು ಸಂಸ್ಥೆ ಹೆಸರಿನಲ್ಲಿ ಕರೆ ಮಾಡಿ ವಂಚಿಸಿದ್ದಾರೆ.

online fraud

ಕರೆ ಮಾಡಿದ ವಂಚಕರು ಸಾಲ ನೀಡುವುದಾಗಿ ಹೇಳಿ ಲಿಂಕ್ ಕಳುಹಿಸಿದ್ದಾರೆ. ನಿಮಗೆ 10 ಲಕ್ಷ ರೂ. ಸಾಲ ಮಂಜೂರಾಗಿದೆ ಎಂದು ನಂಬಿಸಿದ ವಂಚಕರು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಪಾಸ್‌ಬುಕ್ ವಿವರ ಪಡೆದಿದ್ದಾರೆ. ಸಾಲದ ನಿರ್ವಹಣಾ ಶುಲ್ಕವಾಗಿ 34,800 ರೂ. ಹಣವನ್ನು ಫೋನ್‌ಪೇ ಮೂಲಕ ಹಾಕಲು ಹೇಳಿದ್ದಾರೆ. ಇದನ್ನೂ ಓದಿ: BBMP ಬೆಂಕಿ ಪ್ರಕರಣದ ತನಿಖೆ ಚುರುಕು- ಚೀಫ್ ಎಂಜಿನಿಯರ್‌ಗೆ  ನೋಟಿಸ್

ಹತ್ತು ಲಕ್ಷ ರೂ. ಕಡಿಮೆ ಬಡ್ಡಿಗೆ ಸಿಗುತ್ತದೆ ಎಂದು ನಂಬಿದ ಮೌನೇಶ್ವರಪ್ಪ ವಂಚಕರ ಖಾತೆಗೆ ಹಣ ಹಾಕಿದ್ದಾರೆ. ಬಹಳ ದಿನವಾದರೂ ಹಣ ಬಾರದ ಕಾರಣ ವಂಚಕರಿಕೆ ಕರೆ ಮಾಡಿದಾಗ ಮತ್ತೆ 15,200 ರೂ. ಹಣ ಕಳುಹಿಸುವಂತೆ ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಮೌನೇಶ್ವರಪ್ಪ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೌನೇಶ್ವರಪ್ಪ ಕಷ್ಟ ಪಟ್ಟು ದುಡಿದ ದುಡ್ಡನ್ನು ವಂಚಕರ ಖಾತೆಗೆ ಹಾಕಿ ಬರಿಗೈ ಮಾಡಿಕೊಂಡಿದ್ದಾರೆ. ಅಲ್ಲದೆ ಕಳೆದುಕೊಂಡ ಹಣವನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸರ್ಕಾರ ಇದ್ದಾಗಲೆಲ್ಲಾ ಭ್ರಷ್ಟಾಚಾರ ಇತ್ತು: ಡಾ.ಶರಣ ಪ್ರಕಾಶ್ ಪಾಟೀಲ್

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article