– ಕಾಂಬೋಡಿಯಾ, ವಿಯೆಟ್ನಾಂ ಕಂಪನಿಗಳಿಂದ ವಂಚನೆ
– ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಟಾರ್ಚರ್
ರಾಮನಗರ: ವಿದೇಶಕ್ಕೆ ಹೋಗಿ ಒಳ್ಳೆಯ ಕೆಲಸ ಪಡೆದು ಕೈತುಂಬ ಸಂಬಳ ತೆಗೆದುಕೊಳ್ಳಬೇಕು ಎಂದು ಹೋಗಿದ್ದ ರಾಮನಗರದ ಯುವಕನೊಬ್ಬ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಫ್ರಾಡ್ ಫಾರೀನ್ ಕಂಪನಿಗಳು ಯುವಜನತೆಯನ್ನು ವಂಚಿಸುತ್ತಿವೆ.
ರಾಮನಗರದ ಮೊಹ್ಮದ್ ಅಶ್ಪಾಕ್ ವಂಚನೆಗೆ ಒಳಗಾದ ಯುವಕ. ಒಳ್ಳೆಯ ಕೆಲಸ ಸಿಗುತ್ತದೆ ಎಂಬ ಆಸೆಯಿಂದ ಏಜೆಂಟ್‌ಗೆ 2 ಲಕ್ಷ ರೂ. ಹಣ ಕೊಟ್ಟು ಸೌದಿ ಅರೇಬಿಯಾಗೆ ತೆರಳಿದ್ದ.
ಏಜೆಂಟ್‌ನಿಂದ ಮೋಸ ಹೋಗಿ ಮೊಹ್ಮದ್ 10 ತಿಂಗಳು ಸೌದಿಯಲ್ಲಿ ಗೃಹ ಬಂಧನದಲ್ಲಿದ್ದ. 10 ತಿಂಗಳ ಸಂಬಳ ಸಿಗದೇ ನರಕಯಾತನೆ ಅನುಭವಿಸಿದ್ದಾರೆ. ಕೊನೆಗೆ ಅನಿವಾಸಿ ಭಾರತೀಯರ ಸಂಘದ ಸಹಾಯದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ.
ಕೊರೊನಾಕ್ಕಿಂತ ಮೊದಲು ಗಲ್ಫ್ ದೇಶಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಕೊರೋನಾ ನಂತರ ಕಾಂಬೋಡಿಯಾ ಹಾಗೂ ವಿಯ್ನೆಟಾಂಗೆ ಏಜೆಂಟ್‌ಗಳ ಮೂಲಕ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಎರಡು ದೇಶಗಳ ಫ್ರಾಡ್ ಕಂಪನಿಗಳ ಹೆಸರಿನಲ್ಲಿ ನಮ್ಮ ರಾಜ್ಯದಿಂದ ಹೋಗಿ ವಂಚನೆಗೆ ಒಳಗಾಗಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅನಿವಾಸಿ ಭಾರತೀಯ ಸಂಘ ಕಳವಳ ವ್ಯಕ್ತಪಡಿಸಿದೆ.
ಏಜೆಂಟ್‌ಗಳ ಮಾತು ನಂಬಿ ಹೋದ ಕೆಲವರಿಗೆ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಟಾರ್ಚರ್ ಕೊಡ್ತಾರೆ ಎಂಬ ಕರೆಗಳು ಅನಿವಾಸಿ ಭಾರತೀಯ ಸಂಘಕ್ಕೆ ಬರುತ್ತಿವೆ. ಕರೆ ಮಾಡಿದ ಕೆಲವರನ್ನು ಅನಿವಾಸಿ ಭಾರತೀಯ ಸಂಘ ಸುರಕ್ಷಿತವಾಗಿದೆ ಭಾರತ ತಲುಪಿಸಿದೆ ಎನ್ನುತ್ತಾರೆ ಸಂಘದ ಉಪಾಧ್ಯಕ್ಷೆ ಆರತಿಕೃಷ್ಣ.