ಬೆಂಗಳೂರು: ಬರೋಬ್ಬರಿ 52 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಸಂದೀಪ್ ಗುರುರಾಜ್, ಚಾರುಸ್ಮಿತ, ಅಮ್ರಿತ್ ಚೆಂಗಪ್ಪ ಮತ್ತು ಮೀರಾ ಚೆಂಗಪ್ಪ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಆರೋಪಿ ಕತಾರ್ ಏರ್ ವೇಸ್ ಪೈಲೆಟ್ ವಿಶಾಲ್ ಸೋಮಣ್ಣ ತಲೆ ಮರಿಸಿಕೊಂಡಿದ್ದಾನೆ.
Advertisement
Advertisement
ಎ1 ಆರೋಪಿ ಸಂದೀಪ್ ಗುರುರಾಜ್ ಮಣಿಪಾಲ್ ಗ್ರೂಪ್ಸ್ ನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಹದಿನೈದು ವರ್ಷಗಳಿಂದ ಮಣಿಪಾಲ್ ಗ್ರೂಪ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಹಂತ ಹಂತವಾಗಿ 52 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದ್ದಾನೆ. ಆರೋಪಿ ಗುರುರಾಜ್ ಮೊದಲಿಗೆ ಕಂಪನಿ ಚೇರ್‍ಮೆನ್ ಖಾತೆಯಿಂದ 7.65 ಕೋಟಿ ರೂಪಾಯಿಯನ್ನು ತನ್ನ ಹೆಸರಿಗೆ ಮತ್ತು ಆತನ ಹೆಂಡತಿ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದನು. ನಂತರ ಹಂತ ಹಂತವಾಗಿ ಎಲ್ಲರೂ ಒಟ್ಟಿಗೆ ಸೇರಿ ಸುಮಾರು 52 ಕೋಟಿಗೂ ಹೆಚ್ಚು ವಂಚನೆ ಮಾಡಿದ್ದನು.
Advertisement
ಆರೋಪಿತರು ವಂಚನೆ ಮಾಡಿದ್ದ ಹಣದಿಂದ, ಬೆಂಗಳೂರಿನ ಪದ್ಮನಾಭ ನಗರದಲ್ಲಿ ಫ್ಲಾಟ್ (38 ಲಕ್ಷ) ತೆಗೆದುಕೊಂಡಿದ್ದರು. ಅಲ್ಲದೇ ತಮಿಳುನಾಡಿನ ಶ್ರೀರಂಗಂನಲ್ಲಿ 32 ಲಕ್ಷದ ಮನೆ ಕೂಡ ಮಾಡಿದ್ದರು. ಇತ್ತ ಮುಂಬಯಿನ ಥಾಣೆಯ ಲೋದ ಅಪಾರ್ಟ್ ಮೆಂಟ್ ನಲ್ಲಿ 95 ಲಕ್ಷದ ಫ್ಲಾಟ್ ಖರೀದಿಸಿದ್ದರು. ಕನಕಪುರ ರಸ್ತೆಯ ಪ್ರಸ್ಜೀಜ್ ಫಾಲಗಕ್ನ್ ಸಿಟಿಯಲ್ಲಿ 1.25 ಕೋಟಿ ಬಾಳುವ ಅಪಾರ್ಟ್ ಮೆಂಟ್ ಮತ್ತು ಜಿಗಣಿಯಲ್ಲಿ 20 ಲಕ್ಷದ ಸೈಟ್ ನ್ನು ಖರೀದಿಸಿದ್ದಾರೆ.
Advertisement
ಕಂಪನಿಯ ಚೇರ್‍ಮೆನ್ ದೂರಿನ ಮೇರೆಗೆ ಪ್ರಕರಣ ಬೆನ್ನತ್ತಿದ ಕಬ್ಬನ್ ಪಾರ್ಕ್ ಪೊಲೀಸರು ಕಾರ್ಯಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಎರಡು ಕಾರನ್ನು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv