– ಆತ ಸ್ನೇಹಮಯಿ ಕೃಷ್ಣ ಅಲ್ಲ, ಮೋಸಮಯಿ ಕೃಷ್ಣ ಎಂದು ದೂರುದಾರ ಕಿಡಿ
ಚಾಮರಾಜನಗರ: ಮುಡಾ ಪ್ರಕರಣದಲ್ಲಿ (MUDA Case) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಿಸಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದಾರೆ. ತಮ್ಮ ವಿರುದ್ಧದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಸ್ನೇಹಮಯಿ ಕೃಷ್ಣ ಮಾತನಾಡಿ, ಕರುಣಾಕರ ಎಂಬುವರು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಕರುಣಾಕರ ಅವರ ಬಳಿ 50 ಸಾವಿರ ರೂ. ಸಾಲ ಪಡೆದಿರುವುದು ನಿಜ. 3 ಲಕ್ಷ ಸಾಲ ಕೊಡಿಸೋದಾಗಿ ಪ್ರಾಮಿಸರಿ ನೋಟ್ (Promissory Note) ಬರೆಸಿಕೊಂಡಿದ್ದರು. ಪ್ರತಿ ತಿಂಗಳು 50 ಸಾವಿರಕ್ಕೆ ಬಡ್ಡಿ ಕೊಡುತ್ತಾ ಬಂದಿದ್ದೇನೆ. ಈಗ ನ್ಯಾಯಾಧೀಶರು 50 ಸಾವಿರಕ್ಕೆ ಎಷ್ಟು ಸೇರಿಸಿ ಕೊಡ್ತಿರಾ ಅಂತ ಕೇಳಿದರು. 25 ಸಾವಿರ ಸೇರಿಸಿ 75 ಸಾವಿರ ಕೊಡಲು ಒಪ್ಪಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: MUDA Scam| ಸಿಬಿಐ ತನಿಖೆ ಕೋರಿ ಹೈಕೋರ್ಟ್‌ಗೆ ಅರ್ಜಿ
ಅಲ್ಲದೇ ಕರುಣಾಕರ 3 ಲಕ್ಷ ರೂ. ಎಲ್ಲಿ ಕೊಟ್ಟರು ಎಂದು ಪ್ರಶ್ನಿಸಿದ್ದೇನೆ. ಶೀಘ್ರದಲ್ಲೇ ನಿಜಾಂಶ ಗೊತ್ತಾಗಲಿದೆ. ನನ್ನ ವಿರುದ್ಧ ಮೊದಲಿನಿಂದಲೂ ಸಂಚು ನಡೆಯುತ್ತಿದೆ. ನನ್ನ ನೈತಿಕ ಶಕ್ತಿ ಕುಗ್ಗಿಸುವ ಯತ್ನ ನಡೆಯುತ್ತಿದೆ. ನನ್ನ ವಿರುದ್ಧ 22 ಪ್ರಕರಣ ದಾಖಲಾಗಿವೆ. 9 ಪ್ರಕರಣ ಬೋಗಸ್ ಅಂತ ಆಗಿದೆ. 8 ಪ್ರಕರಣಗಳಲ್ಲಿ ನಾನು ನಿರಪರಾಧಿ ಅಂತ ಸಾಬೀತಾಗಿದೆ. 3 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಚಾಮರಾಜನಗರದಲ್ಲಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಮಕ್ಕಳಲ್ಲಿ ವಿಜ್ಞಾನ ಲೋಕದ ಬಗ್ಗೆ ಆಸಕ್ತಿ ಮೂಡಿಸಲು `ಲಿಲ್ ಬಿಗ್ ಫ್ಯಾಂಟಸಿ’ ಸೈನ್ಸ್ ಬಸ್ ಅನಾವರಣ
ಕೋರ್ಟ್‌ಗೆ ಹಾಜರಾಗಿದ್ದ ಸ್ನೇಹಮಯಿ ಕೃಷ್ಣ:
ಹಣ ಕೊಡದೇ ವಂಚನೆ ಮಾಡಿರುವ ಆರೋಪ ಹೊತ್ತಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರಿಂದು ಚಾಮರಾಜನಗರದ ಎಸಿಜೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಶುಕ್ರವಾರ ಮಧ್ಯಾಹ್ನ 3.30 ಗಂಟೆಗೆ ವಿಚಾರಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್
ಕಂತಿನ ರೂಪದಲ್ಲಿ ಒಟ್ಟು 3 ಲಕ್ಷ ಹಣ ಪಡೆದು ಬಳಿಕ ಸಾಲ ವಾಪಾಸ್ ಮಾಡದೇ ವಂಚಿಸಿದ್ದಾರೆಂದು ಕರುಣಾಕರ್ ಎಂಬವರು ದೂರು ಕೊಟ್ಟಿದ್ದರು. ಪ್ರಾಮಿಸಿರಿ ನೋಟ್‌ಗಳನ್ನು ಕೊಟ್ಟು 2018, 2019 ಹಾಗೂ 2020 ರಲ್ಲಿ ಒಟ್ಟು 3 ಲಕ್ಷ ಹಣ ಪಡೆದು ಬಳಿಕ ಈಗ ಹಣ ವಾಪಾಸ್ ಮಾಡದೇ ವಂಚಿಸಿದ್ದಾರೆ ಎಂದು ದೂರುದಾರ ಕರುಣಾಕರ್ ಕಿಡಿಕಾರಿದ್ದರು. ಆತ ಸ್ನೇಹಮಯಿ ಕೃಷ್ಣ ಅಲ್ಲ ಮೋಸಮಯಿ ಕೃಷ್ಣ, ಹಣ ಪಡೆದು ವಂಚಿಸುವುದೇ ಆತನ ಕೆಲಸ, ನಾನಾ ಸಬೂಬು ಹೇಳಿ, ಅನಾರೋಗ್ಯದ ನೆಪವೊಡ್ಡಿ ಹಣ ಪಡೆದು ಈಗ ಹಣ ವಾಪಾಸ್ ಮಾಡದೇ ವಂಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಪ್ರಯಾಣಿಕರಿದ್ದ ವಿಮಾನ ಟೇಕಾಫ್ ಆಗ್ತಿದ್ದಂತೆಯೇ ಸೆಕ್ಸ್ ಶುರು ಹಚ್ಕೊಂಡ ಜೋಡಿಗೆ ಕೋರ್ಟ್ ಶಿಕ್ಷೆ