ವಿಜಯನಗರ: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿ (Fraud Case) ತಲೆಮರೆಸಿಕೊಂಡಿರುವ ಆರೋಪಿ ಅಭಿನವ ಹಾಲಾಶ್ರೀ (Abhinava Halasri) ಸ್ವಾಮೀಜಿ ಹಿರೇಹಡಗಲಿಯಲ್ಲಿ (Hire Hadagali) 68 ಲಕ್ಷ ರೂ. ನೀಡಿ 8 ಎಕರೆ ಜಮೀನು ಖರೀದಿಸಿರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ವಂಚಿಸಿ ಪಡೆದಿದ್ದ 1.5 ಕೋಟಿ ರೂ. ಹಣದಲ್ಲಿ 40 ಲಕ್ಷ ರೂ. ವಿನಿಯೋಗಿಸಿ ಅರ್ಧ ಎಕರೆ ಜಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಾಣ ಸಹ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಕೋಟಿ ಕೋಟಿ ಹಣ ಪಡೆದ ತಕ್ಷಣ ಚೆಂದ್ರಪ್ಪ ಅವರ ಪತ್ನಿ ಹೆಸರಲ್ಲಿ ಇರುವ ಪೆಟ್ರೋಲ್ ಬಂಕ್‍ಗೆ ಸುಮಾರು 40 ಲಕ್ಷ ಹಣ ಹೂಡಿಕೆ ಮಾಡಿ ಲೀಸ್ ಪಡೆದಿದ್ದರು. ಕೋಟಿ ಕೋಟಿ ಡೀಲ್ ನೆಡೆಯುವ ಮೊದಲು ಸ್ವಿಫ್ಟ್ ಡಿಜೈರ್ ಕಾರ್ ತೆಗೆದುಕೊಂಡು ಓಡಾಡುತ್ತಿದ್ದರು. ಇದಾದ ಬಳಿಕ 24 ಲಕ್ಷ ರೂ. ನೀಡಿ ಹೊಸ ಇನೋವಾ ಕ್ರಿಸ್ಟಾ ಕಾರ್ ಖರೀದಿ ಸಹ ಮಾಡಿದ್ದರು. ಇದರಲ್ಲೇ ಸ್ವಾಮೀಜಿ ಪ್ರವಾಸಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಇದ್ನನ್ನೂ ಓದಿ: ಚೈತ್ರಾಗೆ ಮೂರ್ಛೆ ರೋಗ ಇಲ್ಲ: ಆಸೀಮಾ ಬಾನು
ಭಾಷಣಗಾರ್ತಿ ಚೈತ್ರಾ ಕುಂದಾಪುರ (Chaithra Kundapura) ಬಂಧನವಾಗುತ್ತಿದ್ದಂತೆ ವಿಜಯನಗರ ಜಿಲ್ಲೆಯ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ ಮಠದಿಂದ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಅವರು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅಜ್ಞಾತ ಸ್ಥಳಕ್ಕೆ ತರಳಿದ್ದಾರೆ.
ಈ ಪ್ರಕರಣ ಕುತ್ತಿಗೆ ಮಟ್ಟಕ್ಕೆ ಬರುತ್ತಿದ್ದಂತೆ ಹಣ ವಾಪಸ್ ಮಾಡುತ್ತೇನೆ ಎಂದು ಗೋವಿಂದ ಬಾಬು ಅವರ ಬಳಿ ಸ್ವಲ್ಪ ಸಮಯ ಕೊಡುವಂತೆ ಕೇಳಿದ್ದರು. ಆದರೆ ಸಿಸಿಬಿಗೆ ದೂರು ನೀಡಿದ ಬಳಿಕ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಬಳಿಕ ಸ್ವಾಮೀಜಿ ಬೇರೆಯವರ ಬಳಿ ಸಾಲ ಪಡೆದು ಗೋವಿಂದ ಬಾಬು ಅವರಿಗೆ ಕೊಡಲು ಮುಂದಾಗಿದ್ದರು. ಅಷ್ಟರಲ್ಲೇ ಚೈತ್ರಾಳ ಬಂಧನವಾಗಿದೆ. ಇದಾದ ಬಳಿಕ ಸ್ವಾಮಿಜಿ ತಲೆಮರೆಸಿಕೊಂಡಿದ್ದಾರೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ. ಈ ಮಧ್ಯೆ ಚೈತ್ರಾ ಕುಂದಾಪುರ ಹೊಸ ಬಾಂಬ್ ಸಿಡಿಸಿದ್ದು, ಸ್ವಾಮೀಜಿ ಬಂಧನವಾದರೆ ದೊಡ್ಡ ದೊಡ್ಡವರು ಹೆಸರು ಹೊರಬರಲಿದೆ ಎಂದಿದ್ದಾಳೆ. ಇದ್ನನ್ನೂ ಓದಿ: ಅಂಜುಮಾನ್ ಅರ್ಜಿ ವಜಾ – ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣಪನಿಗೆ ಇಲ್ಲ ವಿಘ್ನ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]