ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೆಸರಲ್ಲಿ `ಪ್ರದೀಪ್ ಈಶ್ವರ್ ನಿಮ್ಮೊಂದಿಗೆ’ ಎಂಬ ಫೇಸ್‍ಬುಕ್ (Facebook) ಖಾತೆ ರಚಿಸಿ ಹಣ ವಂಚನೆ ಮಾಡಿದ ಪ್ರಕರಣ ಚಿಕ್ಕಬಳ್ಳಾಪುರದಿಂದ (Chikkaballapura) ವರದಿಯಾಗಿದೆ.
ಅನಾಮಿಕನೋರ್ವ ಈ ಖಾತೆ ತೆರೆದಿದ್ದು, ಜನರ ಬಳಿ ಹಣ ಪೀಕುತ್ತಿರುವುದು ಬೆಳಕಿಗೆ ಬಂದಿದೆ. ತಾನು ಶಾಸಕರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ಅಪರಿಚಿತ ಈ ವಂಚನೆ ಮಾಡಿದ್ದಾನೆ. ಖಾಸಿಂಸಾಬ್ ಎಂಬವರು ತಾನು ಬಡವನಾಗಿದ್ದು, ಶಾಸಕರ ಕಡೆಯಿಂದ ಏನಾದರೂ ಸಹಾಯ ಮಾಡುವಂತೆ ಕೇಳಿದ್ದಾರೆ. ಇದಕ್ಕೆ ವಂಚಕ ತನಗೆ 5000 ರೂ. ಫೋನ್ ಪೇ ಮಾಡಿದರೆ ಶಾಸಕರಿಂದ 4 ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದಾನೆ. ಇದನ್ನು ನಂಬಿ ಖಾಸಿಂ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ತಾನು ವಂಚನೆಗೊಳಗಾಗಿದ್ದು ಖಾಸಿಂಗೆ ಅರಿವಾಗಿದೆ. ಇದನ್ನೂ ಓದಿ: ತಾರಕಕ್ಕೇರಿದ ಅಕ್ಕಿ ರಾಜಕೀಯ, ಬಿಜೆಪಿ ನಾಯಕರಿಗೆ ಸಾಕ್ಷಿ ಸಮೇತ ಸಿದ್ದು ತಿರುಗೇಟು
Advertisement
Advertisement
ಶಾಸಕರ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ವಂಚನೆ ಮಾಡುತ್ತಿರುವ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ವಿನಯ್ ಕುಮಾರ್ ದೂರು ನೀಡಿದ್ದಾರೆ. ಈ ಸಂಬಂಧ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 419, 420 ಹಾಗೂ 66ರ ಅಡಿಯಲ್ಲಿ ಐಟಿ ಕಾಯ್ದೆ ಅಡಿಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮಲಗಿದ್ದ ಪತಿಯ ಗುಪ್ತಾಂಗಕ್ಕೆ ಮಧ್ಯರಾತ್ರಿ ಕಾದ ಎಣ್ಣೆ ಎರಚಿ ಪತ್ನಿ ಎಸ್ಕೇಪ್!