ಶಿವಳ್ಳಿ ಸ್ಪಂದನ ಸಂಘದ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಕೇಸ್ ದಾಖಲು

Public TV
1 Min Read
Shivalli Spandana

ಮಂಗಳೂರು: ಶಿವಳ್ಳಿ ಸ್ಪಂದನ ಬ್ರಾಹ್ಮಣ ಸಂಘದ (Shivalli Spandana Organization) ಹೆಸರಿನಲ್ಲಿ ನಕಲಿ ಲೆಟರ್ ಹೆಡ್, ಸೀಲ್ ಬಳಸಿ ವಂಚನೆ ಮಾಡಿದ ಭಾಸ್ಕರ ಭಟ್ ಮತ್ತು ನಕಲಿ ಪದಾಧಿಕಾರಿಗಳ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ (Kadri Police Station) ಪ್ರಕರಣ ದಾಖಲಾಗಿದೆ.

WhatsApp Image 2024 10 28 at 16.55.55

ಭಾಸ್ಕರ ಭಟ್‌ ಬಿ ಮಂಗಳಾದೇವಿ ಎಂಬವರು ತಾವೇ ಕಾರ್ಯದರ್ಶಿ ಎಂದು ಹೇಳಿಕೊಂಡು ಸಂಘದ ನಕಲಿ ಕಾಗದ ಪತ್ರ ತಯಾರಿಸಿ, ಲೆಟರ್ ಹೆಡ್ ಮತ್ತು ಸೀಲ್ ಬಳಸಿ ವಂಚನೆ ಮಾಡಿದ್ದಾರೆ ಎಂದು ಶಿವಳ್ಳಿ ಸ್ಪಂದನ ಕಾರ್ಯದರ್ಶಿ ಕದ್ರಿಯ ಕೆ.ಕೃಷ್ಣ ಭಟ್ ದೂರು ನೀಡಿದ್ದರು. ಇದನ್ನೂ ಓದಿ: ಸಂಡೂರು| ಅಭ್ಯರ್ಥಿ ಪರ ಪ್ರಚಾರದಿಂದ ಕಾಂಗ್ರೆಸ್‌ ಶಾಸಕರು ದೂರ ದೂರ

ಡಿಆರ್ ರಿಜಿಸ್ಡ್ರಾರ್ ಕಚೇರಿಗೆ ಸಂಘದ ನವೀಕರಣ ಮಾಡಲು ಹೋದಾಗ ಅಲ್ಲಿ ಭಾಸ್ಕರ ಭಟ್ ಬೇರೆಯೇ ಪದಾಧಿಕಾರಿಗಳ ಪಟ್ಟಿ ನೀಡಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: Raichur | ವಕ್ಫ್ ಆಸ್ತಿ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಆರೋಪ – ಸೈಟ್ ಮಾರಾಟ ತಡೆಯುವಂತೆ ಆಗ್ರಹ

ಅಲ್ಲಿಂದ ಸ್ವೀಕೃತಿ ಪತ್ರ ಬರೆದು ಇತರ ನಕಲಿ ಕಾಗದ ಪತ್ರಗಳನ್ನು ಕರ್ನಾಟಕ ಬ್ಯಾಂಕಿಗೆ ನೀಡಿ ಅಲ್ಲಿಯೂ ಅವರ ಹೆಸರಿನ ಜತೆ ಉದಯಶಂಕರ ಭಟ್, ಗಿರೀಶ್ ಎಂಬವರ ಹೆಸರನ್ನು ಬ್ಯಾಂಕ್ ಖಾತೆಯಲ್ಲಿ ನೋಂದಣಿ ಮಾಡಿದ್ದರು. ಖಾತೆಯಲ್ಲಿರುವ ಹಣವನ್ನು ಲಪಟಾಯಿಸಲು ಈ ಕೃತ್ಯ ನಡೆಸಿದ್ದರು ಎಂದು ಕಾರ್ಯದರ್ಶಿ ಕೃಷ್ಣ ಭಟ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜಮೀನುಗಳು ವಕ್ಫ್ ಆಸ್ತಿಗೆ ಜೋಡಣೆ – ಧಾರವಾಡದಲ್ಲೂ ರೈತರ ಪರದಾಟ

Share This Article