ಬೆಂಗಳೂರು: ನಗರದ (Bengaluru) ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಗೇಮಿಂಗ್ ಆ್ಯಪ್‌ನಲ್ಲಿ (Gaming App) ಕೋಟಿ ಕೋಟಿ ಹಣ ಕಳೆದುಕೊಂಡು, ಆ್ಯಪ್ ವಿರುದ್ಧ ವಂಚನೆ ಪ್ರಕರಣ (Fraud Case) ದಾಖಲಿಸಿದ್ದಾರೆ.
ನಿಶಾಂತ್ ಶ್ರೀವತ್ಸ ಎಂಬವರು ಆನ್‍ಲೈನ್ ಗೇಮಿಂಗ್ ಆ್ಯಪ್‌ನಲ್ಲಿ 3 ಕೋಟಿ ರೂ. ಹಣ ಕಳೆದುಕೊಂಡಿದ್ದು, ಸೆಂಟ್ರಲ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪಾಕೇಟ್ 52 ಆ್ಯಪ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
Advertisement
Advertisement
ಆನ್‍ಲೈನ್ ಜೂಜಿನ ಆ್ಯಪ್ ಆಗಿರುವ ಪಾಕೇಟ್ 52, ಸಣ್ಣ ಪುಟ್ಟ ಬೆಟ್ಟಿಂಗ್ ಹಾಕಿದಾಗ ಗೆಲ್ಲಲು ಅನುವು ಮಾಡಿಕೊಡುತ್ತದೆ. ದೊಡ್ಡ ಮೊತ್ತದ ಬೆಟ್ಟಿಂಗ್ ಹಾಕಿದ ವೇಳೆ ಸೋಲಿಸುತ್ತದೆ. ಅಲ್ಲದೇ ನಾವು ಆಟವಾಡಿದ ಟೇಬಲ್‍ನ ಮಾಹಿತಿಯನ್ನೂ ನೀಡುವುದಿಲ್ಲ. ಈ ಆ್ಯಪ್‌ನಲ್ಲಿ ಸಾಕಷ್ಟು ಲೋಪಗಳಿದ್ದು, ಯಾವುದೇ ರೀತಿಯ ಭದ್ರತೆ ಇರುವುದಿಲ್ಲ ಎಂಬ ಆರೋಪ ಮಾಡಲಾಗಿದೆ.
Advertisement
Advertisement
ನಮ್ಮ ಹಣವನ್ನು ದುರುಪಯೋಗ ಮಾಡಿಕೊಂಡು ಆ್ಯಪ್‌ನಿಂದ ವಂಚನೆಯಾಗಿದೆ. ಹೀಗೆ ನಂಬಿಸಿ ಸಾಕಷ್ಟು ಗ್ರಾಹಕರಿಗೆ ವಂಚನೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.