ಡಚ್‌ ಸಂಶೋಧಕನ ಭವಿಷ್ಯ ನಿಜ: ಭಾರತದ ಹಲವೆಡೆ ಭೂಕಂಪ

Public TV
2 Min Read
Dutch researcher Frank Hoogerbeets 1

ನವದೆಹಲಿ: ಟರ್ಕಿ-ಸಿರಿಯಾ (Turkey Syria) ಗಡಿಯಲ್ಲಿ ಪ್ರಬಲ ಭೂಕಂಪದ (Earthquake) ಬಗ್ಗೆ ಮೂರು ದಿನ ಮೊದಲೇ ಸುಳಿವು ನೀಡಿದ್ದ ಡಚ್ ಸಂಶೋಧಕ ಫ್ರಾಂಕ್ ಹೂಗರ್‍ಬಿಟ್ಸ್ (Frank Hoogerbeets) ಭಾರತದ ವಿಚಾರದಲ್ಲಿ ನೀಡಿದ್ದ ಹೇಳಿಕೆಯೂ ನಿಜವಾಗಿದೆ.

ಶೀಘ್ರದಲ್ಲೇ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಭೂಕಂಪನ ಸಂಭವಿಸಲಿದೆ ಎಂದು ಫೆಬ್ರವರಿ 6ರಂದು ವಿಡಿಯೋ ಸಂದೇಶ ನೀಡಿದ್ದರು. ಕಾಕತಾಳಿಯ ಎಂಬಂತೆ, ಕಳೆದ ಮೂರು ದಿನಗಳಿಂದ ದೇಶದ ವಿವಿಧೆಡೆ ಭೂಮಿ ಕಂಪಿಸತೊಡಗಿದೆ. ಶನಿವಾರ ಗುಜರಾತ್‍ನಲ್ಲಿ 3.8 ತೀವ್ರತೆಯ ಭೂಕಂಪ, ಭಾನುವಾರ ಅಸ್ಸಾಂನಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ.

ಬೆಳಗಿನ ಜಾವ ಸಿಕ್ಕೀಂನಲ್ಲಿ 4.3 ತೀವ್ರತೆಯ ಭೂಕಂಪನವಾಗಿದೆ. ಇದೇ ವೇಳೆ, ಅಫ್ಘಾನಿಸ್ತಾನ, ಇಂಡೋನೇಷ್ಯಾದಲ್ಲೂ ಇಷ್ಟೇ ತೀವ್ರತೆಯ ಭೂಕಂಪನವಾಗಿದೆ. ಅದೃಷ್ಟವಶಾತ್ ಎಲ್ಲಿಯೂ ಯಾವುದೇ ಸಾವು ನೋವು ಸಂಭವಿಸಿಲ್ಲ. ಹೂಗರ್‍ಬೀಟ್ಸ್ ಹೇಳಿಕೆಯಂತೆಯೇ ಭೂಕಂಪ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

India seismic zone

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇಂದ್ರ ಭೂವಿಜ್ಞಾನ ಸಚಿವಾಲಯ ಸಂಸತ್‍ನಲ್ಲಿ ಪ್ರಕಟಿಸಿದ ಮಾಹಿತಿ ಅನ್ವಯ ದೇಶದ ಶೇಕಡಾ 60ರಷ್ಟು ಭೂಭಾಗ ಭೂಕಂಪನ ವಲಯದಲ್ಲಿದೆ. ಭೂಕಂಪನ ತೀವ್ರತೆ ಆಧರಿಸಿ ವಿವಿಧ ಪ್ರಾಂತ್ಯಗಳನ್ನು ನಾಲ್ಕು ವಲಯಗಳನ್ನಾಗಿ ಪ್ರಕಟಿಸಲಾಗಿದೆ. ಐದನೇ ವಲಯ  ಅತ್ಯಂತ ಅಪಾಯಕಾರಿಯಾದರೆ 2ನೇ ವಲಯದಲ್ಲಿರುವ ಭೂಭಾಗಕ್ಕೆ ಕಡಿಮೆ ಅಪಾಯ ಇರಲಿದೆ.

ಭೂಕಂಪ -ವಲಯ 5
* ಅತ್ಯಂತ ಹೆಚ್ಚು ಅಪಾಯ ವಲಯ – ತೀವ್ರತೆ 9ಕ್ಕಿಂತ ಹೆಚ್ಚಿರುವ ಸಾಧ್ಯತೆ
* ದೇಶದ ಶೇ.11ರಷ್ಟು ಭೂಭಾಗ – ಕಾಶ್ಮೀರದ ಕೆಲ ಭಾಗ, ಪಶ್ಚಿಮ ಹಿಮಾಚಲ, ಪೂರ್ವ ಉತ್ತರಾಖಂಡ್, ಗುಜರಾತ್‍ನ ರಣ್ ಆಫ್ ಕಛ್, ಉತ್ತರ ಬಿಹಾರ, ಅಂಡಮಾನ್ ನಿಕೋಬರ್, ಈಶಾನ್ಯ ರಾಜ್ಯಗಳು ಇದನ್ನೂ ಓದಿ: ಬೆಳಗಾವಿಯಲ್ಲಿ ನೇಣು ಬಿಗಿದುಕೊಂಡು KAS ಅಧಿಕಾರಿ ಪತಿ ಆತ್ಮಹತ್ಯೆ

 

ಭೂಕಂಪ – ವಲಯ 4
* ಹೆಚ್ಚು ಅಪಾಯ ವಲಯ – ತೀವ್ರತೆ 8ರಷ್ಟಿರುವ ಸಾಧ್ಯತೆ
* ದೇಶದ ಶೇ.18ರಷ್ಟು ಭೂಭಾಗ – ಕಾಶ್ಮೀರದ ಕೆಲಭಾಗ, ಲಡಾಖ್, ಹಿಮಾಚಲದ ಉಳಿದ ಭಾಗ, ಪಂಜಾಬ್, ಹರಿಯಾಣ, ದೆಹಲಿ, ಸಿಕ್ಕೀಂ, ಉತ್ತರ ಯುಪಿ, ಬಿಹಾರದ ಕೆಲ ಭಾಗ,ಪಶ್ಚಿಮ ಬಂಗಾಳ, ಗುಜರಾತ್, ಮಹಾರಾಷ್ಟ್ರದ ಕೆಲ ಭಾಗ, ಪಶ್ಚಿಮ ರಾಜಸ್ಥಾನ

ಭೂಕಂಪ – ವಲಯ 3
* ಅಪಾಯ ವಲಯ – ತೀವ್ರತೆ 7ರಷ್ಟಿರುವ ಸಾಧ್ಯತೆ
* ದೇಶದ ಶೇ.31ರಷ್ಟು ಭೂಭಾಗ – ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ, ಗೋವಾ, ಲಕ್ಷದ್ವೀಪ್, ಗುಜರಾತ್, ಯುಪಿ, ಹರಿಯಾಣ, ಪಂಜಾಬ್, ಪಶ್ಚಿಮ ಬಂಗಾಳದ ಕೆಲ ಭಾಗ. ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‍ಘಡ, ಮಹಾರಾಷ್ಟ್ರ, ಒಡಿಶಾದ ಕೆಲ ಭಾಗ

ಭೂಕಂಪ – ವಲಯ 2
* ಕಡಿಮೆ ಅಪಾಯದ ವಲಯ – ತೀವ್ರತೆ 6ರಷ್ಟಿರುವ ಸಾಧ್ಯತೆ
* ದೇಶದ ಶೇ.40ರಷ್ಟು ಭೂಭಾಗ – ಕರ್ನಾಟಕ, ತೆಲಂಗಾಣ, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರದ ಉಳಿದ ಪ್ರದೇಶ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *