ಮಾಸ್ಕೋ: ತೀವ್ರ ಹಣಾಹಣಿಯಿಂದ ಕೂಡಿದ್ದ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮಾಸ್ಕೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಫ್ರಾನ್ಸ್ 4-2 ಗೋಲುಗಳಿಂದ ಗೆದ್ದು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಚಾಂಪಿಯನ್ ಫ್ರಾನ್ಸ್ ತಂಡ ಬರೋಬ್ಬರಿ 260 ಕೋಟಿ ಜೇಬಿಗಿಳಿಸಿತು. ರನ್ನರ್-ಅಪ್ ತಂಡ ಕ್ರೊವೇಷಿಯಾ 191 ಕೋಟಿ ಬಹುಮಾನ ಪಡೆಯಿತು.
ಈ ಮೂಲಕ 1998ರ ಬಳಿಕ ಎರಡನೇ ಬಾರಿ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಕ್ರೋವೇಷಿಯಾ ಪ್ರಶಸ್ತಿ ಕನಸು ಭಗ್ನಗೊಂಡಿದೆ. ಇಡೀ ಫ್ರಾನ್ಸ್ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಸಾಕರ್ ಅಭಿಮಾನಿಗಳು ವಿಶ್ವದಾದ್ಯಂತ ಸಂಭ್ರಮದಲ್ಲಿದ್ದಾರೆ.
Advertisement
Advertisement
ಮೊದಲಾರ್ಧದಲ್ಲಿ 2-1 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿದ್ದ ಫ್ರಾನ್ಸ್ ದ್ವಿತಿಯಾರ್ಧದಲ್ಲೂ 2 ಗೋಲು ಗಳಿಸಿ ಮಿಂಚಿತು. ಕ್ರೊವೇಷಿಯಾದ ಮಾರಿಯೋ ಮಂಡ್ವೋಕಿಚ್ ಸೆಲ್ಫ್ ಗೋಲ್ ಕಾರಣ 18ನೇ ನಿಮಿಷದಲ್ಲೇ ಫ್ರಾನ್ಸ್‍ಗೆ 1-0 ಮುನ್ನಡೆ ಸಿಕ್ಕಿತು. ಗ್ರೀಜ್‍ಮನ್ ಮಾಡಿದ ಫ್ರೀ ಕಿಕ್ ತಡೆಯೋ ಭರದಲ್ಲಿ ಮಂಡ್ವೋಕಿಚ್ ಫುಟ್ಬಾಲನ್ನ ಹೆಡ್ ಮಾಡಿದ್ರು. ಅದು ನೇರ ಗೋಲು ಪೆಟ್ಟಿಗೆ ಸೇರಿತು. ಇದಾದ ಕೇವಲ 10 ನಿಮಿಷದಲ್ಲಿ ತಿರುಗೇಟು ನೀಡಿದ ಕ್ರೊವೇಷಿಯಾ 1-1ರಿಂದ ಸಮಬಲ ಸಾಧಿಸಿತು.
Advertisement
28ನೇ ನಿಮಿಷದಲ್ಲಿ ಇವಾನ್ ಪೆರಿಸಿಕ್ ಈಸಿಯಾಗಿ ಗೋಲ್ ಬಾರಿಸಿದ್ರು. ಇದಾದ ಬೆನ್ನಲ್ಲೇ ಅಂದ್ರೆ 38 ನಿಮಿಷದಲ್ಲಿ ಪೆನಾಲ್ಟಿ ಗೋಲ್ ಬಾರಿಸಿದ ಗ್ರೀಜ್‍ಮನ್ ಫ್ರಾನ್ಸ್‍ಗೆ 2-1ರಿಂದ ಮುನ್ನಡೆ ತಂದುಕೊಟ್ರು.. ದ್ವಿತಿಯಾರ್ಧದಲ್ಲಿ, ಪಂದ್ಯದ ಒಟ್ಟಾರೆ 59 ನಿಮಿಷದಲ್ಲಿ ಫ್ರಾನ್ಸ್ ಮಿಡ್‍ಫೀಲ್ಡರ್ ಪೌಲ್ ಪೋಗ್ಬಾ ತಂಡಕ್ಕೆ ಮೂರನೇ ಗೋಲು ತಂದಿತ್ತರು. ಇದಾದ ಕೇವಲ 5 ನಿಮಿಷದಲ್ಲಿ ಕಿಲಿಯನ್ ಎಂಬಾಪೆ ಮತ್ತೊಂದು ಗೋಲು ಗಳಿಸಿದ್ರು.
Advertisement
Advantage #FRA #FRACRO // #WorldCupFinal pic.twitter.com/nxL8Z4V77L
— FIFA World Cup (@FIFAWorldCup) July 15, 2018
ಈ ಮೂಲಕ ಫ್ರಾನ್ಸ್ 4-1 ಗೋಲುಗಳಿಂದ ಮುನ್ನಡೆ ಸಾಧಿಸಿತು. ಇದಾದ 4 ನಿಮಿಷದಲ್ಲೇ ಮಂಡ್ವೋಕಿಚ್ ಕ್ರೊವೇಶಿಯಾಗೆ 2ನೇ ಗೋಲು ತಂದಿಟ್ಟರು. ಆದ್ರೆ ಫ್ರಾನ್ಸ್ ಮುನ್ನಡೆಯನ್ನು ತಡೆಯಲು ಆಗಲಿಲ್ಲ. ಹೆಚ್ಚುವರಿ ಅವಧಿಯಲ್ಲೂ ಯಾವುದೇ ಗೋಲು ಬರಲಿಲ್ಲ.
The first penalty in regular time of a #WorldCupFinal since Zinedine Zidane in 2006! #FRACRO // #WorldCup pic.twitter.com/fG0CJK10TJ
— FIFA World Cup (@FIFAWorldCup) July 15, 2018
#CRO have come from behind to defeat…
A big half awaits if they are to do it again against #FRA in Moscow! #FRACRO // #WorldCupFinal pic.twitter.com/f7uIF4gMvE
— FIFA World Cup (@FIFAWorldCup) July 15, 2018
⭐️⭐️#FRA
France have won the 2018 FIFA #WorldCup in Moscow! #FRACRO // #WorldCupFinal pic.twitter.com/fZhmJmxjVh
— FIFA World Cup (@FIFAWorldCup) July 15, 2018
???? Congratulations to @equipedefrance / @FrenchTeam as they win their second world title – Félicitations! ????????#WorldCupFinal pic.twitter.com/GJYDfbWtqD
— HNS (@HNS_CFF) July 15, 2018
????#WorldCup pic.twitter.com/YtscCQvOEi
— FIFA World Cup (@FIFAWorldCup) July 15, 2018