ಚಿಪ್ ಘಟಕ ತೆರೆಯಲ್ಲ- ವೇದಾಂತ ಜೊತೆಗಿನ 1.61 ಲಕ್ಷ ಕೋಟಿ ಒಪ್ಪಂದವನ್ನ ರದ್ದುಗೊಳಿಸಿದ ಫಾಕ್ಸ್‌ಕಾನ್‌

Public TV
3 Min Read
Foxconn 2

ನವದೆಹಲಿ: ಭಾರತದ ವೇದಾಂತ (Vedanta) ಕಂಪನಿ ಜೊತೆಗೂಡಿ ಗುಜರಾತ್‌ನಲ್ಲಿ 1.61 ಲಕ್ಷ ಕೋಟಿ ರೂ.(19 ಶತಕೋಟಿ ಡಾಲರ್‌) ಹೂಡಿಕೆಯೊಂದಿಗೆ ಆರಂಭವಾಗಬೇಕಿದ್ದ ಸೆಮಿಕಂಡಕ್ಟರ್‌ (Semiconductor) ಘಟಕದ ಒಪ್ಪಂದವನ್ನ ತೈವಾನ್‌ನ ಫಾಕ್ಸ್‌ಕಾನ್‌ (Foxconn) ಕಂಪನಿ ರದ್ದು ಮಾಡಿದೆ.

ಭಾರತದಲ್ಲಿ ವೇದಾಂತ ಜೊತೆ ಜಂಟಿ ಉದ್ಯಮವಾಗಿ ಸೆಮಿ ಕಂಡಕ್ಟರ್‌ ತಯಾರಿಸುವುದಿಲ್ಲ ಎಂದು ಫಾಕ್ಸ್‌ಕಾನ್‌ ಹೇಳಿದ ನಂತರ ಪರಸ್ಪರ ಉದ್ಯಮವನ್ನು ಕೊನೆಗೊಳಿಸುವ ನಿರ್ಧಾರವನ್ನ ಎರಡೂ ಸಂಸ್ಥೆಗಳಿಂದ ಪ್ರಕಟಿಸಲಾಗಿದೆ. ಇದನ್ನೂ ಓದಿ: Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

ಫಾಕ್ಸ್‌ಕಾನ್‌ ಮತ್ತು ವೇದಾಂತ ಕಂಪನಿ ಗುಜರಾತ್‌ನಲ್ಲಿ 1.61 ಲಕ್ಷ ಕೋಟಿ ರೂ. ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ (Semiconductor Unit) ಸ್ಥಾಪನೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದವು. ಎರಡೂ ಕಂಪನಿಗಳು ಜಂಟಿಯಾಗಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಿತ್ತು. ಇದೀಗ ಒಪ್ಪಂದ ರದ್ದಾಗಿದ್ದು, ಭಾರತದ ಸೆಮಿ ಕಂಡಕ್ಟರ್‌ ಕ್ಷೇತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ.

semiconductor 1 1

ಈ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಪ್ರತಿಕ್ರಿಯಿಸಿ, ಜಂಟಿ ಉದ್ಯಮದ ಸ್ಥಗಿತವು ಭಾರತವನ್ನು ಸೆಮಿಕಂಡಕ್ಟರ್ ಚಿಪ್ ಹಬ್ ಮಾಡುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್‌ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ

ಈ ನಡುವೆ ಸೆಮಿಕಂಡಕ್ಟರ್‌ಗಳ ಪೂರೈಕೆಗೆ ಸ್ಥಳೀಯ ಪಾಲುದಾರರ ಮೂಲಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಒಪ್ಪಂದವನ್ನು ಮುರಿಯಲು ಫಾಕ್ಸ್‌ಕಾನ್ ಕಾರಣವನ್ನು ನೀಡಿಲ್ಲ. ಜಂಟಿ ಉದ್ಯಮದಿಂದ ಬೇರೆ ಬೇರೆಯಾದ ನಂತರ ವೇದಾಂತ ಕಂಪನಿ ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ ಸ್ಥಾಪಿಸಲು ಇತರ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

Vedanta

ಕಳೆದ ವರ್ಷ ವೇದಾಂತ ಲಿಮಿಟೆಡ್‌ (Vedanta Ltd.) ಮತ್ತು ತೈವಾನ್‌ನ ಫಾಕ್ಸ್‌ಕಾನ್‌ (Foxconn) ಕಂಪನಿಯು ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಜಾಗ ನೀಡಲು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್‌ ಮುಂದಾಗಿದ್ದವು. ರಾಜ್ಯಗಳು ಪೈಪೋಟಿಗೆ ಇಳಿದ ಹಿನ್ನೆಲೆಯಲ್ಲಿ ಕಂಪನಿ ಭಾರೀ ರಿಯಾಯಿಯಿತಿಯನ್ನು ಬಯಸಿತ್ತು. ಮುಖ್ಯವಾಗಿ 1000 ಎಕ್ರೆ ಭೂಮಿಯನ್ನು ಯಾವುದೇ ಶುಲ್ಕವಿಲ್ಲದೇ 99 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಬೇಕು. ಇದರ ಜೊತೆ 20 ವರ್ಷಗಳ ಅವಧಿಗೆ ನೀರು ಮತ್ತು ವಿದ್ಯುತ್‌ ಅನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಬೇಡಿಕೆ ಇಟ್ಟಿತ್ತು. ಈ ಬೇಡಿಕೆಗೆ ಗುಜರಾತ್‌ ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಹೊಸ ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಉತ್ಪಾದನಾ ಘಟಕ ಆರಂಭಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.

Vedanta picks Gujarat for 20 billion dollar semiconductor foray with

ಪ್ರಸ್ತುತ ವಿಶ್ವದ ಚಿಪ್‌ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್‌ ಕಂಪನಿಗಳೇ ಹೆಚ್ಚು ಪ್ರಾಬಲ್ಯ ಹೊಂದಿದೆ. ಭಾರತವನ್ನ ಚಿಪ್‌, ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿತ್ತು. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ ನಿಗದಿತ ವೆಚ್ಚದಲ್ಲಿ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನ ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿತ್ತು.

2020ರ ವೇಳೆಗೆ ಕೇವಲ 1.12 ಲಕ್ಷ ಕೋಟಿ ರೂ. ನಷ್ಟಿದ್ದ ಭಾರತದ ಸೆಮಿಕಂಡಕ್ಟರ್‌ ವಲಯ 2026ರ ವೇಳೆಗೆ 5 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆಯನ್ನು ಹೊಂದಲಾಗಿದೆ.

Web Stories

Share This Article