ನವದೆಹಲಿ: ಆಪಲ್ (Apple) ಕಂಪನಿ ಇದೇ ಮೊದಲ ಬಾರಿಗೆ ಬಿಡುಗಡೆಯಾಗಲಿರುವ ಐಫೋನ್ ಪ್ರೊ (iPhone Pro) ಮತ್ತು ಪ್ರೊ ಮ್ಯಾಕ್ಸ್ (Pro Max) ಫೋನ್‌ಗಳನ್ನು ಭಾರತದಲ್ಲಿ ತಯಾರಿಸುತ್ತಿದೆ.
ಹೌದು. ಮುಂದಿನ ಸೆಪ್ಟೆಂಬರ್‌ನಲ್ಲಿ ಐಫೋನ್ 16 ಫೋನ್‌ಗಳನ್ನು ಆಪಲ್ ಬಿಡುಗಡೆ ಮಾಡಲಿದೆ. ಸಾಧಾರಣವಾಗಿ ಬಿಡುಗಡೆಯಾಗಲಿರುವ ತನ್ನ ಫೋನ್‌ಗಳನ್ನು ಹೆಚ್ಚಾಗಿ ಚೀನಾದ ಫ್ಯಾಕ್ಟರಿಗಳಲ್ಲಿ ತಯಾರಿಸುತ್ತಿತ್ತು. ಆದರೆ ಈ ಬಾರಿ ಭಾರತದ ಫಾಕ್ಸ್‌ಕಾನ್ ಘಟಕದಲ್ಲಿ ಐಫೋನ್‌ಗಳ ಪೈಕಿ ದುಬಾರಿ ಬೆಲೆ ಇರುವ ಪ್ರೊ ಮಾಡೆಲ್ ತಯಾರಿಸುತ್ತಿರುವುದು ವಿಶೇಷ.
Advertisement
ತಮಿಳುನಾಡಿನಲ್ಲಿರುವ ಫಾಕ್ಸ್‌ಕಾನ್ ಘಟಕದಲ್ಲಿ ಐಫೋನ್ ಭಾಗಗಳ ಜೋಡಣೆ ಈ ವಾರದಿಂದ ಆರಂಭವಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಉತ್ಪಾದನೆಗಾಗಿ ಕಾರ್ಮಿಕರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ಭಾರತದಲ್ಲಿ ಫೋನ್ ತಯಾರಾಗುವ ಕಾರಣ ಐಫೋನ್‌ಗಳಿಗೆ ಆಮದು ಸುಂಕ ಇರುವುದಿಲ್ಲ. ವಿದೇಶಗಳಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿದ್ದರೂ 10% ಬೆಲೆ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಟೋಕಿಯೋ – ಬೆಂಗಳೂರು ಮಾರ್ಗದ ವಿಮಾನ ಹಾರಾಟ ಹೆಚ್ಚಿಸಿದ BLR
Advertisement
Advertisement
ಜಾಗತಿಕವಾಗಿ ಮಾರಾಟವಾಗುವ ಐಫೋನ್‌ಗಳ ಪೈಕಿ 70% ಐಫೋನ್‌ಗಳನ್ನು ತೈವಾನ್‌ನಲ್ಲಿರುವ ಫಾಕ್ಸ್‌ಕಾನ್ ಕಂಪನಿ ಉತ್ಪಾದಿಸುತ್ತದೆ. ಈ ಕಂಪನಿ ಭಾರತ ಅಲ್ಲದೇ ಚೀನಾ,ಇಂಡೋನೇಷ್ಯಾ ಸೇರಿದಂತೆ ಹಲವು ಕಡೆ ತನ್ನ ಘಟಕವನ್ನು ತೆರಿದಿದೆ. ಮುಂದಿನ 3-4 ವರ್ಷಗಳಲ್ಲಿ ವಿಶ್ವದಲ್ಲಿ ಮಾರಾಟವಾಗುವ ಐಫೋನ್‌ಗಳ ಪೈಕಿ 25% ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುವ ಗುರಿಯನ್ನು ಐಫೋನ್ ಹಾಕಿಕೊಂಡಿದೆ.
Advertisement
ಮುಂದಿನ ದಿನಗಳಲ್ಲಿ ಟಾಟಾ ಗ್ರೂಪ್ ಐಫೋನ್‌ಗಳನ್ನು ತಯಾರಿಸಲಿದೆ. ಬಹುಪಾಲು ಭಾರತ-ನಿರ್ಮಿತ ಪ್ರೊ ಮತ್ತು ಪ್ರೊ ಮ್ಯಾಕ್ಸ್ ಸಾಧನಗಳನ್ನು ಆಪ್‌ಲ್ ಯುರೋಪ್, ಮಧ್ಯಪ್ರಾಚ್ಯ ಮತ್ತು ಅಮೆರಿಕಗೆ ರಫ್ತು ಮಾಡುವ ಸಾಧ್ಯತೆಯಿದೆ.
ಭಾರತದಲ್ಲಿ ಯಾಕೆ?
10 ವರ್ಷಗಳ ಹಿಂದೆ ಐಫೋನ್ ಬಿಡುಗಡೆಯಾದ 5-6 ತಿಂಗಳ ನಂತರ ಭಾರತದ ಮಾರುಕಟ್ಟೆಗೆ ಐಫೋನ್‌ಗಳನ್ನು ಆಪಲ್ ಬಿಡುಗಡೆ ಮಾಡುತ್ತಿತ್ತು. ಆದರೆ ಈಗ ಭಾರತದಲ್ಲಿ ಐಫೋನ್ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆಪಲ್ ಉತ್ಪನ್ನಗಳ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಭಾರತದಲ್ಲಿ ಉತ್ಪಾದನೆ ಮಾಡುತ್ತಿರುವ ಕಾರಣ ಬೆಲೆ ಸಹ ಕಡಿಮೆಯಿದೆ. ಹೀಗಾಗಿ ಕೆಲ ವರ್ಷಗಳಿಂದ ಜಾಗತಿಕವಾಗಿ ಬಿಡುಗಡೆಯಾಗುವ ಸಮಯದಲ್ಲೇ ಭಾರತದಲ್ಲೂ ಐಫೋನ್ ಬಿಡುಗಡೆಯಾಗುತ್ತಿದೆ.