ಬೀಜಿಂಗ್: ಚೀನಾದಲ್ಲಿ ಕೊರೊನಾ ಆರ್ಭಟ ಮುಂದುವರಿಯುತ್ತಿದ್ದು, 26 ಮಿಲಿಯನ್ ಜನರಿರುವ ಶಾಂಘೈ ನಗರಕ್ಕೆ ಲಾಕ್‌ಡೌನ್ ವಿಧಿಸಿ ಚೀನಾ ಸರ್ಕಾರ ಆದೇಶ ಹೊರಡಿಸಿದೆ.
ಶಾಂಘೈ ನಗರದಲ್ಲಿ ಭಾನುವಾರ ಒಂದೇ ದಿನ 3,450 ಮಂದಿಯಲ್ಲಿ ಲಕ್ಷಣ ರಹಿತ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ಚೀನಾದ ಒಟ್ಟು ಪ್ರಕರಣಗಳ ಶೇ.70 ರಷ್ಟಿದೆ. ಅಲ್ಲದೆ 50 ಮಂದಿಯಲ್ಲಿ ಲಕ್ಷಣ ಸಹಿತ ಪ್ರಕರಣಗಳು ವರದಿಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಶಾಂಘೈನ ಪುಡಾಂಗ್ ಜಿಲ್ಲೆ ಸೇರಿದಂತೆ ಹತ್ತಿರವಿರುವ ನಗರಗಳಲ್ಲೂ ಸೋಮವಾರದಿಂದ ಲಾಕ್‌ಡೌನ್ ಆರಂಭಿಸಿದ್ದು ಮುಂದಿನ ಶುಕ್ರವಾರದ ವರೆಗೆ ಮುಂದುವರಿಯಲಿದೆ ಎಂದು ಚೀನಾ ಸರ್ಕಾರ ಹೇಳಿದೆ. ಇದನ್ನೂ ಓದಿ: 89 ಜನರಿಗೆ ಕೊರೊನಾ, 85 ಜನ ಡಿಸ್ಚಾರ್ಜ್ – 4 ಸಾವು
ಈ ಬೆನ್ನಲ್ಲೇ ಹುವಾಂಗ್‌ಪು ನದಿಯ ಪಶ್ಚಿಮಕ್ಕೆ ಇರುವ ಡೌನ್‌ಟೌನ್ ಪ್ರದೇಶವೂ ಮುಂದಿನ ಶುಕ್ರವಾರದಿಂದ ತನ್ನದೇ ನಿಯಮಗಳಿಂದ 5 ದಿನಗಳ ಕಾಲ ಲಾಕ್‌ಡೌನ್ ವಿಧಿಸಲಿದೆ.
ಲಸಿಕೆಯನ್ನೇ ಪಡೆದಿಲ್ಲ
ಮಾರ್ಚ್ ತಿಂಗಳಲ್ಲಿ ಚೀನಾದಲ್ಲಿ 56 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ನಡುವೆ ಚೀನಾದಲ್ಲಿ ಇನ್ನೂ ಕೆಲವರು ಕೋವಿಡ್-19 ಲಸಿಕೆಯನ್ನೇ ಪಡೆದಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ರಾಷ್ಟ್ರೀಯ ದತ್ತಾಂಶದ ಪ್ರಕಾರ 60 ವರ್ಷ ಮೇಲ್ಪಟ್ಟ 52 ಮಿಲಿಯನ್ ಜನರು ಇನ್ನೂ ಯಾವುದೇ ಕೋವಿಡ್ -19 ಲಸಿಕೆಯನ್ನೇ ಪಡೆದಿಲ್ಲ ಎಂದು ತೋರಿಸಿದೆ. ಇದನ್ನೂ ಓದಿ: 21 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ- ರಾಜ್ಯದಲ್ಲಿಂದು 92 ಮಂದಿಗೆ ಕೊರೊನಾ, ಇಬ್ಬರು ಸಾವು
60-69ರ ವರ್ಷದೊಳಗಿನ ಶೇ.56.4 ಜನರು ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ ಹಾಗೂ 70-79 ವರ್ಷದೊಳಗಿನ ಶೇ.48.4ರಷ್ಟು ಜನರು ಮೊದಲ ಡೋಸ್ ಅಷ್ಟೇ ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ.