ವಾಷಿಂಗ್ಟನ್: ವಾರದ ಹಿಂದೆ ಶಂಕಿತ ಚೀನಾದ ಬೇಹುಗಾರಿಕಾ ಬಲೂನನ್ನು (Spy Balloon) ಅಮೆರಿಕ (America) ಹೊಡೆದುರುಳಿಸಿದ ಬಳಿಕ ಒಂದಾದ ಮೇಲೊಂದರಂತೆ ಆಕಾಶದಲ್ಲಿ ಹಾರಾಡುತ್ತಿದ್ದ ಶಂಕಿತ ವಸ್ತುಗಳನ್ನು (Flying Object) ತನ್ನ ಯುದ್ಧ ವಿಮಾನಗಳನ್ನು ಬಳಸಿ ಹೊಡೆದುರುಳಿಸಿದೆ. ಭಾನುವಾರ ಅಮೆರಿಕ ಮತ್ತೊಂದು ತೇಲುತ್ತಿದ್ದ ವಸ್ತುವನ್ನು ಹೊಡೆದುರುಳಿಸಿದ್ದು, ವಾರದಿಂದ ಇಂತಹ ಒಟ್ಟು 4 ವಸ್ತುಗಳನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಚೀನಾದೊಂದಿಗಿನ (China) ಉದ್ವಿಗ್ನತೆ ಹಾಗೂ ನಿಗೂಢ ದಾಳಿಯ ಭೀತಿಯ ಹಿನ್ನೆಲೆ ಅಮೆರಿಕ ತನ್ನ ಆಕಾಶದ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ವಾರದ ಹಿಂದೆ ತನ್ನ ಅಣ್ವಸ್ತ್ರ ತಾಣದ ಮೇಲೆ ಹಾರಾಡುತ್ತಿದ್ದ ಬೇಹುಗಾರಿಕಾ ಬಲೂನಿನ ಹಿಂದೆ ಚೀನಾದ ಕುತಂತ್ರವಿದೆ ಎಂದು ಹೇಳಲಾಗಿದೆ.
Advertisement
Advertisement
ಭಾನುವಾರ ಹೊಡೆದುರುಳಿಸಲಾದ ಹೊಸ ವಸ್ತು ನೇತಾಡುವ ತಂತಿಯೊಂದಿಗೆ ಅಷ್ಟಭುಜಾಕೃತಿಯ ರಚನೆ ಹೊಂದಿತ್ತು ಎಂದು ತಿಳಿಸಲಾಗಿದೆ. ಇದು ಯಾವುದೇ ಮಿಲಿಟರಿ ಬೆದರಿಕೆಯನ್ನು ಉಂಟುಮಾಡುತ್ತದೆ ಎಂದು ಪರಿಗಣಿಸಲಾಗಿಲ್ಲವಾದರೂ ಇದು ನಾಗರಿಕ ವಿಮಾನಯಾನಕ್ಕೆ ಅಪಾಯ ಉಂಟುಮಾಡುವ ಸಾಧ್ಯತೆಯಿತ್ತು. ಈ ಹಿನ್ನೆಲೆ ಭೂಮಿಯಿಂದ ಸುಮಾರು 20,000 ಅಡಿಗಳಷ್ಟು ಎತ್ತರದಲ್ಲಿ ಹಾರಾಡುತ್ತಿದ್ದ ವಸ್ತುವನ್ನು ಎಫ್-16 ಫೈಟರ್ ಜೆಟ್ ಬಳಸಿ ಹೊಡೆದುರುಳಿಸಲಾಗಿದೆ ಎಂದು ಹಿರಿಯ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಅದ್ಧೂರಿ Aero India 2023 ಏರ್ ಶೋ
Advertisement
Advertisement
ಇದು ಕಣ್ಗಾವಲು ಸಾಮರ್ಥ್ಯ ಹೊಂದಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆದರೆ ಅದನ್ನು ನಾವು ತಳ್ಳಿ ಹಾಕುವಂತಿಲ್ಲ. ಕೆನಡಾದ ಗಡಿಯ ಬಳಿ ಹಾರಾಡುತ್ತಿದ್ದ ಅಪರಿಚಿತ ವಸ್ತುವನ್ನು ನಾವು ಮಿಚಿಗನ್ ಸರೋವರದ ಪ್ರದೇಶದಲ್ಲಿ ಹೊಡೆದುರುಳಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಭವನದಲ್ಲಿ ಮೋದಿ ರಾತ್ರಿ ವಾಸ್ತವ್ಯ – 800ಕ್ಕೂ ಹೆಚ್ಚು ಪೊಲೀಸರಿಂದ ಬಿಗಿಭದ್ರತೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k