ಹಾಸನ: ಆಲೂರು ತಾಲ್ಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನೋವಾ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಕುಪ್ಪಳ್ಳಿ ಗ್ರಾಮದ ಚೇತನ್ (23), ತಟ್ಟೆಕೆರೆ ಗ್ರಾಮದ ಪುರುಷೋತ್ತಮ (28), ಗುಡ್ಡೇನಹಳ್ಳಿ ಗ್ರಾಮ ಅಶೋಕ್ (35) ಹಾಗೂ ಚಿಗಳೂರು ಪಾಳ್ಯದ ದಿನೇಶ್ (30) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿದ ಬೈಕ್ ಸವಾರನಿಂದ ಲಂಚ ಪಡೆದ ಆರೋಪ – ಎಎಸ್‌ಐ ಅಮಾನತು
ಮೃತದೇಹಗಳನ್ನು ಆಲೂರು ತಾಲ್ಲೂಕು ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಲೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತರಲ್ಲಿ ಅಶೋಕ ವರ್ಕ್‌ಶಾಪ್ ನಡೆಸುತ್ತಿದ್ದ. ಎಂಟು ವರ್ಷದ ಹಿಂದೆ ಈತನ ಸಹೋದರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅವರ ಕುಟುಂಬದ ಜವಾಬ್ದಾರಿಯನ್ನು ಅಶೋಕ ನಿರ್ವಹಿಸುತ್ತಿದ್ದರು. ಇನ್ನೂ ದಿನೇಶ್ ಬೆಂಗಳೂರಿನಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಇಂದು ಸಂಜೆ 5 ಗಂಟೆ ಸುಮಾರಿಗೆ ಇನ್ನೋವಾ ಕಾರು ಹಾಸನ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು. ಅದೇ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಸೇರಿದ ಟಿಪ್ಪರ್ ಲಾರಿ ಎದುರು ಕಡೆಯಿಂದ ಬರುತ್ತಿತ್ತು. ಈ ವೇಳೆ ಇನ್ನೋವಾ ಚಾಲಕ ಮುಂದಿನ ವಾಹನವನ್ನು ಓವರ್‌ಟೇಕ್ ಮಾಡಲು ಹೋಗಿ ಟಿಪ್ಪರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನೂ ಓದಿ: ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ ಜೆಡಿಎಸ್-ಬಿಜೆಪಿ ಹೊಂದಾಣಿಕೆ: ಕಾಲೆಳೆದ ಕಾಂಗ್ರೆಸ್
ಕಾರಿನೊಳಗೆ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರ ತೆಗೆಯಲು ಸ್ಥಳೀಯರು ಪರದಾಡಬೇಕಾಯಿತು. ಕೆಲವರು ಹಾರೆ ಮೊದಲಾದ ವಸ್ತುಗಳನ್ನು ತಂದು ಡೋರ್ ಹಾಗೂ ಕಿಟಿಕಿ ಒಡೆದು ಮೃತದೇಹಗಳನ್ನು ಹೊರ ತೆಗೆದರು. ಭೀಕರ ಅಪಘಾತದಿಂದಾಗಿ ಕೆಲಹೊತ್ತು ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ 75 ರ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಆರೇಳು ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿರುವುದೇ ಈ ರೀತಿಯ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]