ನವದೆಹಲಿ: ನಾಲ್ಕು ವರ್ಷದವಳಿದ್ದಾಗಿನಿಂದಲೂ ಸೋದರ ಮಾವ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು 40 ವರ್ಷದ ಮಹಿಳೆ ಆರೊಪಿಸಿದ್ದಾರೆ.
ಕಡೆಗೂ 40 ವರ್ಷದ ಮಹಿಳೆಯ ದೂರಿನ ಕುರಿತು ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆರೋಪಿ ವಿಚಾರಣೆ ಎದುರಿಸುತ್ತಿದ್ದಾನೆ. ಸೋದರಮಾವ 4 ವರ್ಷದವಳಿದ್ದಾಗಿನಿಂದಲೂ ನನ್ನ ಮೇಲೆ ಅತ್ಯಾಚಾರ ಎಸಗಿದ್ದು, ಇದರಿಂದಾಗಿ ನಾನು ಹಲವು ಬಾರಿ ಶಸ್ತ್ರಚಕಿತ್ಸೆಗೆ ಒಳಗಾಗಿದ್ದೇನೆ. 1981ರಲ್ಲಿ ಮೊದಲ ಬಾರಿಗೆ ನನ್ನ ಮೇಲೆ ಅತ್ಯಾಚಾರ ಎಸಗಲಾಯಿತು. ಆಗ ನಾನು ನಾಲ್ಕು ವರ್ಷದವಳಿದ್ದೆ, 10ನೇ ತರಗತಿಗೆ ಬರುವಷ್ಟರಲ್ಲಿ ನನಗೆ ಮೂರು ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂಬ ಆಘಾತಕಾರಿ ಮಾಹಿತಿಯನ್ನು ಮಹಿಳೆ ಬಿಚ್ಚಿಟ್ಟಿದ್ದಾರೆ.
ಅಡಿಷನಲ್ ಸೆಶನ್ ಜಡ್ಜ್ ಉಮೆದ್ ಸಿಂಗ್ ಗ್ರೆವಾಲ್ ಅವರು ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‍ಗಳಡಿ ಅತ್ಯಾಚಾರ ಹಾಗೂ ಬೆದರಿಕೆ ಒಡ್ಡಿದರ ಆಧಾರದ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದ್ದಾರೆ. ಆರೋಪಿಯು ಸಂತ್ರಸ್ತೆಯ ಸಹೋದರಿಯ ಪತಿಯಾಗಿದ್ದಾನೆ ಎಂಬುದು ಇನ್ನೂ ಅಚ್ಚರಿಯ ಸಂಗತಿಯಾಗಿದೆ.
ಕೋರ್ಟಿನಲ್ಲಿ ವಿಚಾರಣೆ ವೇಳೆ ಸಂತ್ರಸ್ತೆಯು ಪ್ರಕರಣದ ಕುರಿತು ವಿವರಿಸಿದ್ದು, 1981ರಲ್ಲಿ ಮೊದಲ ಬಾರಿ ನನ್ನ ಮೇಲೆ ಅತ್ಯಾಚಾರ ನಡೆಯಿತು. ನಾನು 10ನೇ ತರಗತಿಯಲ್ಲಿ ಓದುತ್ತಿರುವಾಗ ಕೊನೆಯ ಶಸ್ತ್ರಚಿಕಿತ್ಸೆಯಾಗುವವರೆಗೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಈ ಕುರಿತು 2016ರಲ್ಲಿ ದೂರು ದಾಖಲಿಸಿದ್ದೆ ಎಂದು ತಿಳಿಸಿದ್ದಾರೆ.
ಆರೋಪಿಯ ದುರ್ನಡತೆ ಕುರಿತು ಸಂತ್ರಸ್ತೆ ತನ್ನ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ ತಿಳಿಸಿದ್ದು, ಆದರೆ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಅಲ್ಲದೆ ಸಂತ್ರಸ್ತೆಯನ್ನೇ ಬೈದು ಯಾರಿಗೂ ಈ ಕುರಿತು ಹೇಳಬೇಡ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಆರೋಪಿಯು ನನ್ನ ಸಹೋದರಿಯನ್ನು ವಿವಾಹವಾದ, ನಂತರ ನಮ್ಮ ಮನೆಯಲ್ಲಿಯೇ ವಾಸವಿದ್ದರು. ಆಗಲೂ ಸಹ ಪ್ರತಿನಿತ್ಯ ನನಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ ನನ್ನ ತಾಯಿ ಸಾವನ್ನಪ್ಪಿದಾಗ ಅಂತಿಮ ಸಂಸ್ಕಾರಕ್ಕೂ ನನ್ನನ್ನು ಕಳುಹಿಸಲಿಲ್ಲ. ಆರೋಪಿಯ ಮಕ್ಕಳು ಹಾಗೂ ಸಂಬಂಧಿಕರು ನನ್ನನ್ನು ಕೊಲೆ ಮಾಡಲು ಯತ್ನಿಸಿದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.