ಮೈಸೂರು: ನಗರದ ನಾಗರಹೊಳೆಯಲ್ಲಿ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿಗಳ ಹಿಂಡಿನ ದರ್ಶನವಾಗಿದೆ.
ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಹುಲಿಗಳು ಒಂದೇ ಬಾರಿಗೆ ಪ್ರವಾಸಿಗರಿಗೆ ಎದುರಾಗಿವೆ. ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯ ನಾಗರಹೊಳೆ ವ್ಯಾಪ್ತಿಯ ದಮ್ಮನಕಟ್ಟೆ ಸಫಾರಿ ರೇಂಜ್‍ನಲ್ಲಿ ಹೀಗೆ ಹುಲಿಗಳ ಹಿಂಡು ಕಾಣಿಸಿದೆ.
Advertisement
Advertisement
4 ಹುಲಿಗಳನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಕಂಡು ಬರುತ್ತಿದ್ದು ಹುಲಿಗಳನ್ನು ಕಾಣಲೆಂದು ಸಫಾರಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ.
Advertisement
ಈ ಹಿಂದೆ ಚಾಮರಾಜನಗರದ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಪ್ರವಾಸಿಗರಿಗೆ ಒಂದೇ ಕಡೆ ಮೂರು ಹುಲಿಗಳ ದರ್ಶನವಾಗಿತ್ತು. ಎರಡು ಮರಿ ಹುಲಿಗಳೊಂದಿಗೆ ತಾಯಿ ಹುಲಿ ದರ್ಶನವಾಗಿದ್ದು, ಸಫಾರಿಗೆ ಹೋದ ಪ್ರವಾಸಿಗರಿಗೆ ಸಖತ್ ಪೋಸ್ ನೀಡಿತ್ತು. ಹುಲಿಗಳು ಫೋಟೋಗೆ ಪೋಸ್ ಕೊಟ್ಟ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.