CrimeDakshina KannadaDistrictsKarnatakaLatestLeading NewsMain Post

ಸುರತ್ಕಲ್ ಫಾಜಿಲ್ ಹತ್ಯೆ ಕೇಸಲ್ಲಿ ನಾಲ್ವರು ಭಾಗಿ ಶಂಕೆ

Advertisements

ಮಂಗಳೂರು: ಸುರತ್ಕಲ್‍ನಲ್ಲಿ ಫಾಜಿಲ್ ಹತ್ಯೆ ಪ್ರಕರಣ ಸ್ಫೋಟಕ ಸುಳಿವು ಪೊಲೀಸರಿಗೆ ಲಭ್ಯವಾಗಿದೆ ಅಂತ ತಿಳಿದು ಬಂದಿದೆ.

ಸುಹಾಸ್, ಮೋಹನ್, ಗಿರಿ, ಅಮಿತ್ ಎಂಬ ನಾಲ್ವರು ಫಾಜಿಲ್ ಕೊಂದಿದ್ದಾರಾ ಅನ್ನೋದನ್ನು ಪೊಲೀಸರು ತನಿಖೆ ನಡೆಸ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಎಂಬುದಾಗಿ ಮಾಹಿತಿ ಸಿಕ್ಕಿದ್ದು, ಅಮಿತ್ ಕ್ರಾಸ್ತಾ ಎಂಬಾತ ಕಾರು ಡ್ರೈವರ್ ಆಗಿದ್ದ ಎನ್ನಲಾಗ್ತಿದೆ. ಇದನ್ನೂ ಓದಿ: ಆರೋಪಿಗಳೊಂದಿಗೆ ಅಜಿತ್‍ಗೆ ಸಂಪರ್ಕವಿದೆ – ಆದಷ್ಟು ಬೇಗ ಇತರ ಆರೋಪಿಗಳನ್ನು ಬಂಧಿಸುತ್ತೇವೆ: ಶಶಿಕುಮಾರ್

ಇಂದು ನಾಲ್ವರು ಆರೋಪಿಗಳ ಬಂಧನ ಸಾಧ್ಯತೆ ಇದೆ. ಈ ಹಿಂದೆ ಕೊಲೆ ಪ್ರಕರಣಗಳಲ್ಲಿ ಸುಹಾಸ್ ಭಾಗಿಯಾಗಿದ್ದ. ಇನ್ನು, ಹತ್ಯೆಗೆ ಬಳಸಲಾಗಿದ್ದ ಇಯಾನ್ ಕಾರ್ ಉಡುಪಿಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕಾಜರಕಟ್ಟೆ ಎಂಬ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಬಿಳಿ ಬಣ್ಣದ ಕಾರ್‍ನ ಮಾಲೀಕ ಅಜಿತ್ ಕ್ರಾಸ್ತಾನನ್ನು ಪೊಲೀಸರು ಬಂಧಿಸಿದ್ದಾರೆ.

ಈತ ಸುರತ್ಕಲ್‍ನ ಪ್ರೇಮ ನಗರದ ನಿವಾಸಿಯಾಗಿದ್ದು, ಬಾಡಿಗೆ ವಾಹನಗಳನ್ನು ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ. ಕಾರ್‍ನ ಸೀಟ್‍ಗಳು ರಕ್ತಸಿಕ್ತವಾಗಿದ್ದು, ಕಾರಿನಲ್ಲಿ ಮೈಕ್ರೋ ಸಿಮ್ ಸೇರಿದಂತೆ ವಾಟರ್ ಬಾಟ್ಲಿ, ಒಂದಷ್ಟು ಹಣ ಮತ್ತಿತರ ದಾಖಲೆಗಳು ಪತ್ತೆಯಾಗಿವೆ. ಸಿಕ್ಕಿರೋ ಸಿಮ್ ಯಾರ ಹೆಸರಿನಲ್ಲಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಆರೋಪಿಗಳ ಬೆರಳಚ್ಚು ಮತ್ತು ಪ್ರಮುಖ ಸಾಕ್ಷಿಗಳು ನಾಶವಾಗಬಾರದು ಎಂಬ ಹಿನ್ನೆಲೆ ಸಂಪೂರ್ಣವಾಗಿ ಪ್ಲಾಸ್ಟಿಕ್‍ನಿಂದ ಕಾರನ್ನು ಮುಚ್ಚಲಾಗಿದೆ. ಇವತ್ತು ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಪತ್ತೆಯಾದ ಕಾರಿನಲ್ಲಿ ರಕ್ತದ ಕಲೆ!

Live Tv

Leave a Reply

Your email address will not be published.

Back to top button