ಬಳ್ಳಾರಿ:ನಗರದ ಮಾರ್ಕಂಡೇಯ ಕಾಲೋನಿಯಲ್ಲಿ ಜನರನ್ನು ಭಯ ಬೀಳುವ ರೀತಿಯಲ್ಲಿ ತಲೆ ಬುರುಡೆ, ಕೈ, ಕಾಲುಗಳ ಎಲುಬುಗಳು ಪತ್ತೆಯಾಗಿವೆ.
ನಾಲ್ಕು ತಲೆಬುರುಡೆ, ಎಲುಬುಗಳನ್ನು ಮುಂದಿಟ್ಟು, ಕೂದಲು ಸುಟ್ಟು, ದೀಪ ಹಚ್ಚಿಟ್ಟು ಪೂಜೆ ಮಾಡಲಾಗಿದೆ. ಇಂದು ಎಳ್ಳು ಅಮಾವಾಸ್ಯೆ ಹಿನ್ನೆಲೆಯಲ್ಲಿ ವಾಮಾಚಾರ (Black Magic) ಮಾಡಿರಬಹುದು ನಿವಾಸಿಗಳು ಹೇಳುತ್ತಿದ್ದಾರೆ.
ತಲೆ ಬುರುಡೆ ಪತ್ತೆಯಾದ ಸ್ಥಳದಲ್ಲಿ ನೀರಿನ ಟ್ಯಾಂಕ್ ಇದೆ. ಆದರೆ ಭಯದಿಂದ ನೀರು ತೆಗೆದುಕೊಂಡು ಹೋಗಲು ಹಿಂದೇಟು ಹಾಕಿದ್ದಾರೆ. ಪಕ್ಕದಲ್ಲಿಯೇ ಅಂಗನವಾಡಿ ಇದ್ದು, ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ.