ಚಿಕ್ಕೋಡಿ: ದೂದ್‌ಗಂಗಾ ನದಿಯಲ್ಲಿ (Doodhganga River) ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಜಲಸಮಾಧಿ ಆಗಿರುವ ಘಟನೆ ಮಹಾರಾಷ್ಟ್ರದ (Maharashtra) ಕೊಲ್ಹಾಪುರ (Kolhapur) ಜಿಲ್ಲೆಯ ಕಾಗಲ ತಾಲೂಕಿನ ಬಸ್ತವಾಡೆ ಸೇತುವೆ ಬಳಿ ನಡೆದಿದೆ.
ಕಾಗಲ ತಾಲೂಕಿನ ಅನ್ನುರ ಗ್ರಾಮದ ಜಾತ್ರೆಗೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯುವಾಗ ದುರ್ಘಟನೆ ನಡೆದಿದೆ. ಮೃತರಲ್ಲಿ ಇಬ್ಬರು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿಗಳಾಗಿದ್ದಾರೆ. ರೇಶ್ಮಾ ದಿಲೀಪ್ ಏಳಮಲೇ (34), ಯಶ್ ದಿಲೀಪ್ ಏಳಮಲೇ (17) ಹಾಗೂ ಇಬ್ಬರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಜಿತೇಂದ್ರ ಲೋಕರೆ (36) ಹಾಗೂ ಸವಿತಾ ಅಮರ ಕಾಂಬಳೆ (27) ಮೃತ ದುರ್ದೈವಿಗಳು. ಇದನ್ನೂ ಓದಿ: ಮನೆಯಲ್ಲೇ ಮತದಾನ ಮಾಡಿದ ಅನ್ಸಾರಿ, ಮನಮೋಹನ್ ಸಿಂಗ್, ಜೋಶಿ
ಮೃತರ ಶವಗಳನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಕಾಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೊಬೈಲ್ ಕೊಡದಿದ್ದಕ್ಕೆ ಸುತ್ತಿಗೆಯಿಂದ ಹೊಡೆದು ತಮ್ಮನ ಹತ್ಯೆಗೈದ ಅಣ್ಣ