ತುಮಕೂರು: ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಒಟ್ಟು ನಾಲ್ವರು ನೀರುಪಾಲಾಗಿರುವ ದಾರುಣ ಘಟನೆ ತುಮಕೂರಿನ (Tumakuru) ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ (Siddagangaa Mutt) ಬಳಿ ನಡೆದಿದೆ.
ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಕೃಷಿ ಹೊಂಡ ಗೋಕಟ್ಟೆಯಲ್ಲಿ ಬಿದ್ದು ಶಂಕರ್ (11), ರಕ್ಷಿತ್ (11), ಲಕ್ಷ್ಮಿ (50) ಹಾಗೂ ಮಹಾದೇವಪ್ಪ (51) ಸಾವನ್ನಪ್ಪಿದ್ದಾರೆ. ಈಜಲು ಹೋಗಿದ್ದ ಶಂಕರ್ ಹಾಗೂ ರಕ್ಷಿತ್‌ನನ್ನು ರಕ್ಷಿಸಲು ಲಕ್ಷ್ಮಿ ಹಾಗೂ ಮಹದೇವಪ್ಪ ಧಾವಿಸಿದಾಗ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: 6 ತಿಂಗಳ ಹೆಣ್ಣು ಮಗು ಕೊಳೆತ ಸ್ಥಿತಿಯಲ್ಲಿ ಪತ್ತೆ
ವಿದ್ಯಾರ್ಥಿಗಳಾದ ಶಂಕರ್ ಹಾಗೂ ರಕ್ಷಿತ್ ರಾಮನಗರ ನಿವಾಸಿಗಳು. ಲಕ್ಷ್ಮಿ ನೆಲಮಂಗಲ ಹಾಗೂ ಮಹಾದೇವಪ್ಪ ಯಾದಗಿರಿ ನಿವಾಸಿಯಾಗಿದ್ದು, ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿದ್ದಾಗ ನಾಲ್ವರೂ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ನೀರಿಗೆ ಇಳಿದಿದ್ದ ರಂಜಿತ್ ಎಂಬ ಇನ್ನೊಬ್ಬ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಮುಸ್ಲಿಮರಿಗಷ್ಟೇ ಗಂಡಸ್ತನ ಮೀಸೆ ಇರೋದಲ್ಲ, ಹಿಂದೂ ಹುಡುಗರಿಗೂ ಇದೆ: ಸ್ವಾಮೀಜಿಯಿಂದ ವಿವಾದಾತ್ಮಕ ಹೇಳಿಕೆ
Web Stories