ಕತ್ತಲೆಯಲ್ಲೇ ಬಂದು ಮಲಗಿದ್ದ ಇಬ್ಬರು ಮಕ್ಕಳು ಸೇರಿ ದಂಪತಿಯನ್ನು ಹೊಡೆದು ಕೊಂದ್ರು!

Public TV
2 Min Read
MURDER

ರಾಯ್ಪುರ್: ಮಲಗಿದ್ದ ಸಂದರ್ಭದಲ್ಲಿ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಅಮಾನವೀಯ ಘಟನೆಯೊಂದು ನಡೆದಿದ್ದು, ಇದೀಗ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.

ಈ ಘಟನೆ ಮಧ್ಯಪ್ರದೇಶದ ಮಹಸಮುಂದ್ ಗ್ರಾಮದಲ್ಲಿ ನಡೆದಿರುವ ಬಗ್ಗೆ ಗುರುವಾರ ಬೆಳಕಿಗೆ ಬಂದಿದೆ. 30 ವರ್ಷದ ಯೋಗಮಯ ಸಾಹು, ಪತಿ 32 ವರ್ಷದ ಚೇತನ್ ಹಾಗೂ ಇವರ 8 ಮತ್ತು ವರ್ಷದ ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ.

ಯೋಗಮಯ ಅವರು ಸಹಾಯಕ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಇವರ ಪತಿ ಚೇತನ್, ರಾಯ್ಪುರದಲ್ಲಿ ಮೆಡಿಕಲ್ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ವ್ಯವಹಾರ ನಡೆಸುತ್ತಿದ್ದರು. ಇವರು ಸರ್ಕಾರಿ ಆರೋಗ್ಯ ಸಂಸ್ಥೆಯ ಕಂಪೌಂಡ್ ನಲ್ಲಿರೋ ಮನೆಯೊಂದರಲ್ಲಿ ವಾಸವಾಗಿದ್ದರು. ಘಟನೆಯ ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ರಕ್ತಸಿಕ್ತವಾಗಿ ಬಿದ್ದಿದ್ದ ಕುಟುಂಬವನ್ನು ಕಂಡು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂದು ಶಂಕಿಸಿದ್ದಾರೆ.

ಇವರು ನೆಲೆಸಿದ್ದ ಮನೆಯಲ್ಲಿ ಅಳವಡಿಸಲಾಗಿದ್ದ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅದರಲ್ಲಿ ಕೆಲ ವಾರಗಳ ಹಿಂದೆಯೇ ಈ ಕುಟುಂಬದ ಕೊಲೆಗೆ ದುಷ್ಕರ್ಮಿಗಳು ಸ್ಕೆಚ್ ಹಾಕಿರುವುದು ಪೊಲೀಸರ ಗಮನಕ್ಕೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಹೊಸ ಕಾರಿನೊಂದಿಗೆ ಬಂದು ಇವರ ಮನೆ ಮುಂದೆ ಪಾರ್ಕ್ ಮಾಡಿದ್ದಾನೆ. ನಂತರ ಕಾರಿನಿಂದ ಇಳಿದು ಅನುಮಾನಸ್ಪದವಾಗಿ ಸುತ್ತಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದ್ರೆ ಬುಧವಾರ ಮತ್ತು ಗುರುವಾರ ಆ ಪ್ರದೇಶದಲ್ಲಿ ಕರೆಂಟ್ ಇಲ್ಲದಿದ್ದುದರಿಂದ ಘಟನೆ ನಡೆದ ದಿನದ ದೃಶ್ಯಾವಳಿಗಳು ಲಭ್ಯವಾಗಿಲ್ಲ ಅಂತ ತಿಳಿಸಿದ್ದಾರೆ.

crime 4801

ಗುರುವಾರ ಸುರಿದ ಭಾರೀ ಗಾಳಿ, ಮಳೆಯಿಂದಾಗಿ ಮೃತ ಕುಟುಂಬ ನೆಲೆಸಿದ್ದ ಪ್ರದೇಶದಲ್ಲಿ ಕರೆಂಟ್ ಇರಲಿಲ್ಲ. ವಿಪರೀತ ಸೆಕೆ ಇದ್ದುದರಿಂದ ಆ ಪ್ರದೇಶದ ನಿವಾಸಿಗಳು ಮನೆ ಬಾಗಿಲು ತೆರೆದಿಟ್ಟು ಮಲಗುತ್ತಿದ್ದರು. ಸಾಹು ಕುಟುಂಬದವರು ಕೂಡ ಮನೆ ಮುಂದಿನ ಬಾಗಿಲು ತೆರೆದಿಟ್ಟು ಮನೆಯ ವರಾಂಡದಲ್ಲಿ ಮಲಗಿದ್ದರು. ಈ ಸಮಯವನ್ನೇ ಉಪಯೋಗಿಸಿಕೊಂಡ ದುಷ್ಕರ್ಮಿಗಳು ಕತ್ತಲೆಯಲ್ಲೇ ಬಂದು ಮಲಗಿದ್ದ ಕುಟುಂಬವನ್ನು ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾರೆ.

ದುಷ್ಕರ್ಮಿಗಳು ಕುಟುಂಬದ ಮೇಲೆ ಅಟ್ಟಹಾಸ ಮೆರೆಯುವ ಸಂದರ್ಭದಲ್ಲಿ ಸಾಹು ಜೋರಾಗಿ ಕಿರುಚಿಕೊಂಡಿದ್ದಾರೆ. ಇದು ನೆರೆಮನೆಯವರಿಗೂ ಕೇಳಿದೆ. ಆದ್ರೆ ಅವರು ಪಕ್ಕದಲ್ಲೇ ಹೆಲ್ತ್ ಸೆಂಟರ್ ಇರುವುದರಿಂದ ಯಾರೋ ಪ್ರಸವ ನೋವಿನಿಂದ ಚೀರಾಡುತ್ತಿದ್ದಾರೆ ಅಂತ ತಿಳಿದು ಸುಮ್ಮನಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳೇ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಕೊಲೆಗಾರರು ವಾರ್ಡ್ ರೋಬ್ ಹಾಗೂ ಮನೆಯಲ್ಲಿದ್ದ ಕೆಲವೊಂದು ಬಾಕ್ಸ್ ಗಳನ್ನು ತೆರೆದಿದ್ದಾರೆ. ಆದ್ರೆ ಅವರಿಗೆ ಕದಿಯಲು ಯಾವುದೇ ವಸ್ತುಗಳು ಸಿಕ್ಕಿರಲಿಲ್ಲ ಅಂತ ರಾಯ್ಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *