ನವದೆಹಲಿ: ಇಲ್ಲಿನ ಕೊಹಾತ್ ಎನ್ಕ್ಲೇವ್ ನಲ್ಲಿ ನಡೆದ ಭಾರೀ ಅಗ್ನಿ ದುರುಂತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿಯಾದ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆ ಇಂದು ಮುಂಜಾನೆ ನಡೆದಿದ್ದು, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಮೃತರ ಬಗ್ಗೆ ತಿಳಿದುಬಂದಿಲ್ಲ.
Advertisement
Advertisement
ಘಟನೆಯಿಂದಾಗಿ 3 ಮತ್ತು 7 ವರ್ಷದ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಅಲ್ಲದೇ ಕಟ್ಟಡದ ಕೆಳಗೆ ಪಾರ್ಕ್ ಮಾಡಿದ್ದ 5 ವಾಹನಗಳು ಸುಟ್ಟು ಭಸ್ಮವಾಗಿವೆ. ಕಟ್ಟಡದ ಪಂಪ್ ಕೋಣೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕೂಡಲೇ ಅವರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಆದರೆ ಅವರು ಸ್ಥಳಕ್ಕೆ ದೌಡಾಯಿಸುವಾಗ ತಡವಾದ ಹಿನ್ನೆಲೆಯಲ್ಲಿ ಬೆಂಕಿ ಕಟ್ಟಡಕ್ಕೆ ಆವರಿಸಿಕೊಂಡಿದೆ ಅಂತ ಆರೋಪಿಸಿದ್ದಾರೆ.
Advertisement
ಸದ್ಯ ಲಜ್‍ಪತ್ ನಗರ ಪೊಲೀಸರು ಬೆಂಕಿ ಹೇಗೆ ಉಂಟಾಗಿದೆ ಅಂತ ತನಿಖೆ ನಡೆಸುತ್ತಿದ್ದಾರೆ.
Advertisement
#Visuals: 4 dead after a fire broke out in a house in Kohat Enclave allegedly due to a short circuit. Further investigation underway. #Delhi pic.twitter.com/d3S4Hgy3NX
— ANI (@ANI) April 13, 2018