ತಿರುವನಂತಪುರಂ: ಕೇರಳದ ಮುನ್ನಾರಿನಲ್ಲಿ ನೋಡಿದ ಬೀದಿ ನಾಯಿಯನ್ನು ವಿದೇಶಿಗರು ತಮ್ಮ ಜೊತೆ ಸ್ವಿಟ್ಜರ್ಲ್ಯಾಂಡ್‌ಗೆ ಕರೆದುಕೊಂಡು ಹೋಗಲಿದ್ದಾರೆ.
ಜಾನ್ ಹಾಗೂ ಎಲನ್ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ವಾಸಿಸುತ್ತಾರೆ. ಜಾನ್ ಹಾಗೂ ಎಲನ್ ಈ ನಾಯಿಯನ್ನು ನೋಡಿದ್ದು, ಇಬ್ಬರಿಗೂ ಅದು ಇಷ್ಟವಾಗಿದೆ. ಅಲ್ಲದೆ ಎಷ್ಟು ದಿನ ಮುನ್ನಾರಿನಲ್ಲಿ ಇರುತ್ತೇವೋ ಅಷ್ಟು ದಿನ ಈ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ ಎಂದು ನಿರ್ಧರಿಸಿದ್ದಾರೆ.
Advertisement
Advertisement
ಮೂರು ದಿನಗಳ ಕಾಲ ನಾಯಿಯನ್ನು ನೋಡಿಕೊಂಡ ಬಳಿಕ ಇಬ್ಬರಿಗೂ ಅದರ ಮೇಲೆ ಪ್ರೀತಿ ಆಗಿದೆ. ಹಾಗಾಗಿ ಇಬ್ಬರು ಆ ನಾಯಿಯನ್ನು ದತ್ತು ಪಡೆದು ತಮ್ಮ ಜೊತೆ ಸ್ವಿಟ್ಜರ್ಲ್ಯಾಂಡ್‌ಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.
Advertisement
ಜಾನ್ ಹಾಗೂ ಎಲನ್ ಈ ನಾಯಿಗೆ ‘ನೇನಿ’ ಎಂದು ಹೆಸರಿಟ್ಟಿದ್ದಾರೆ. ಅಲ್ಲದೆ ಅದಕ್ಕೆ ಪ್ರತಿನಿತ್ಯ ಸ್ನಾನ ಮಾಡಿಸಿ ಊಟವನ್ನು ತಿನ್ನಿಸುತ್ತಾರೆ. ಅಷ್ಟೇ ಅಲ್ಲದೆ ನಾಯಿಯನ್ನು ಗುರುತಿಸಲು ಜಾನ್ ಹಾಗೂ ಎಲನ್ ಅದಕ್ಕೆ ಮೈಕ್ರೋಚಿಪ್ ಕೂಡ ಹಾಕಿದ್ದಾರೆ.
Advertisement
ಸದ್ಯ ನಾಯಿಯನ್ನು ಕರೆದುಕೊಂಡು ಹೋಗಲು ಬೇಕಾದ ದಾಖಲೆಗಳನ್ನು ಜಾನ್ ಹಾಗೂ ಎಲನ್ ಸಿದ್ಧಪಡಿಸುತ್ತಿದ್ದಾರೆ. ಅಲ್ಲದೆ ನೇನಿಯ ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಯಲಿದೆ. ವೈದ್ಯಕೀಯ ಪರೀಕ್ಷೆ ನಡೆದ ನಂತರ ಜಾನ್ ಹಾಗೂ ಎಲನ್ ‘ನೇನಿ’ಯನ್ನು ಸ್ವಿಟ್ಜರ್ಲ್ಯಾಂಡ್‌ಗೆ ಕರೆದುಕೊಂಡು ಹೋಗಲಿದ್ದಾರೆ.