ಧಾರವಾಡ: ನ್ಯಾಯಾಧೀಶರ ಕೊಠಡಿಗಳಿಗೆ ನುಗ್ಗಿ ಕಿಟಲೆ ಮಾಡುತ್ತಿದ್ದ ನಾಲ್ಕು ಮಂಗಗಳನ್ನು ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ.
ಕಳೆದೆರಡು ತಿಂಗಳಿಂದ ನವಲಗುಂದ ಕೋರ್ಟ್ ಆವರಣದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದ್ದು, ವಕೀಲರು ಹಾಗೂ ಕಕ್ಷಿದಾರರ ಮೇಲೆ ಮಂಗಗಳು ಜಿಗಿದು ಬಹಳ ತೊಂದರೆ ಕೊಡುತ್ತಿದ್ದವು. ಆಗ ಅವುಗಳನ್ನು ಗದರಿಸಿ ಓಡಿಸಲಾಗುತ್ತಿತ್ತು. ಆದರು ಅವುಗಳ ಹಾವಳಿ ಕಡಿಮೆಯಾಗಿರಲಿಲ್ಲ.
Advertisement
Advertisement
ಕೆಲವು ದಿನಗಳಿಂದ ಇದೇ ರೀತಿ ಮಂಗಗಳು ತೊಂದರೆ ಕೊಡುತ್ತಿದ್ದವು. ಆದರೆ ಮಂಗಳವಾರ ನ್ಯಾಯಾಧೀಶರಿದ್ದ ಕೊರ್ಟ್ ಆವರಣಕ್ಕೆ ಮಂಗಗಳು ನುಗ್ಗಿ ಆವರಣದಲ್ಲಿಯೇ ಜಿಗಿದಾಟ ನಡೆಸಿ ಕಿಟಲೆ ಮಾಡಿವೆ. ಇದರಿಂದ ಕುಪಿತಗೊಂಡ ನ್ಯಾಯಾಧೀಶರು ಈ ಮಂಗಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಹಾಗೂ ನವಲಗುಂದ ಪುರಸಭೆಯವರಿಗೆ ತಾಕೀತು ಮಾಡಿದ್ದರು.
Advertisement
ನ್ಯಾಯಾಧೀಶರು ತಾಕೀತು ಮಾಡಿದ್ದರಿಂದ ಪುರಸಭೆಯವರು ಎಚ್ಚೆತ್ತುಕೊಂಡಿದ್ದು, ಇಂದು ಹಾವಳಿ ಕೊಡುತ್ತಿದ್ದ ನಾಲ್ಕು ಮಂಗಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv