BollywoodCinemaLatestMain Post

ಟಿವಿ ಕಲಾವಿದೆಯನ್ನು ಗುಂಡಿಕ್ಕಿ ಕೊಂದ ಉಗ್ರರಿಗೆ ಗುಂಡಿನಿಂದಲೇ ಪಾಠ ಕಲಿಸಿದ ಭಾರತೀಯ ಸೇನೆ

ಟಿಕ್‌ಟಾಕ್ ಮತ್ತು ಟಿವಿ ಕಾರ್ಯಕ್ರಮಗಳ ಮೂಲಕ ಮನೆಮಾತಾದ ನಟಿ ಅಮ್ರೀನ್ ಭಟ್ ಅವರನ್ನು ಭಯೋತ್ಪಾದಕರು ಗುಂಡು ಹಾರಿಸಿ ಕೊಂದಿದ್ದರು. ಈಗ ಮಹಿಳಾ ಟಿವಿ ಕಲಾವಿದೆಯ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಸೇರಿದಂತೆ ನಾಲ್ವರು ಲಷ್ಕರ್-ಎ-ತೊಯ್ಬಾ ಉಗ್ರರು ಭದ್ರತಾಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ.

ಟಿವಿ ಕಲಾವಿದೆಯನ್ನು ಕ್ರೂರವಾಗಿ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಇದೀಗ ತಡರಾತ್ರಿ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಅಮ್ರೀನ್ ಭಟ್ ಅವರನ್ನು ಕೊಂದು ಹಾಕಿದ್ದ ಇಬ್ಬರು ಉಗ್ರರು ಭಾರತೀಯ ಸೇನಾ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದಾರೆ.

ಈ ಇಬ್ಬರೂ ಭಯೋತ್ಪಾದರಾದ ಶಾಹಿದ್ ಮುಷ್ತಾಕ್ ಭಟ್, ಫರ್ಹಾನ್ ಹಬೀಬ್ ಎಂದು ಗುರುತಿಸಲಾಗಿದೆ. ಅವರು ಎಲ್‌ಇಟಿ ಲತೀಫ್ ಅವರ ಸೂಚನೆಯ ಮೇರೆಗೆ ಟಿವಿ ಕಲಾವಿದನನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ. ಉಗ್ರರ ಮಾರಕಾಸ್ತ್ರಗಳ ಜತೆ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ:  ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ

ಶ್ರೀನಗರ ನಗರದ ಸೌರಾ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್ಕೌಂಟರ್‌ನಲ್ಲಿ ಇಬ್ಬರು ಎಲಇಟಿ ಉಗ್ರರು ಸೇನೆ ಗುಂಡಿಗೆ ಬಲಿಯಾಗಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 3 ದಿನಗಳಲ್ಲಿ ಜೆಎಂನ 3 ಮತ್ತು ಎಲಇಟಿ ಸಂಘಟನೆಗಳ 10 ಭಯೋತ್ಪಾದಕರು ಬಲಿಯಾಗಿದ್ದಾರೆ. ದಿವಂಗತ ಅಂಬ್ರೀನ್ ಭಟ್ ಅವರ ಹತ್ಯೆ ಪ್ರಕರಣವನ್ನು 24 ಗಂಟೆಗಳಲ್ಲಿ ಪರಿಹರಿಸಲಾಗಿದೆ ಎಂದು ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published.

Back to top button