ಕ್ಯಾಬ್‌ ಬುಕ್‌ ಮಾಡಿದ್ರು; ಪಿಕಪ್‌ ಮಾಡಲು ಬಂದ ಚಾಲಕನನ್ನೇ ಎಳೆದು ಹಾಕಿ ಕ್ಯಾಬ್‌ ಕದ್ದೊಯ್ದರು!

Public TV
1 Min Read

ಉತ್ತರ ಪ್ರದೇಶ: ಅಗ್ರಿಗೇಟರ್ ಆ್ಯಪ್ ಮೂಲಕ ಕ್ಯಾಬ್ (Cab) ಬುಕ್ ಮಾಡಿದ್ದ ನಾಲ್ವರು, ತಮ್ಮನ್ನು ಕರೆದೊಯ್ಯಲು ಬಂದ ಟ್ಯಾಕ್ಸಿ ಚಾಲಕನನ್ನೇ ಎಳೆದು ಹಾಕಿ ವಾಹನ ಕದ್ದು ಎಸ್ಕೇಪ್‌ ಆಗಿರುವ ಘಟನೆ , ಗುರುಗ್ರಾಮ್‌ನಲ್ಲಿ (Gurugram) ನಡೆದಿದೆ.

ಕ್ಯಾಬ್ ಚಾಲಕ ಹರೀಶ್ ಕುಮಾರ್ ರಾತ್ರಿ 11 ಗಂಟೆ ಸುಮಾರಿಗೆ ಕ್ಯಾಬ್ ಅಗ್ರಿಗೇಟರ್ ಆ್ಯಪ್‌ನಲ್ಲಿ ಬುಕಿಂಗ್ ಸ್ವೀಕರಿಸಿ ಪಿಕಪ್ ಪಾಯಿಂಟ್ ತಲುಪಿದ್ದರು. ಬುಕ್‌ ಮಾಡಿದ್ದ ನಾಲ್ವರು ಕ್ಯಾಬ್‌ಗಾಗಿ ಕಾದಿದ್ದರು. ಕ್ಯಾಬ್‌ ಹತ್ತಿರ ಬಂದು ಚಾಲಕ ಬುಕಿಂಗ್‌ ಖಚಿತಪಡಿಸಿಕೊಳ್ಳಲು ಮುಂದಾಗಿದ್ದ. ಈ ವೇಳೆ ಚಾಲಕನನ್ನು ಎಳೆದು ಹಾಕಿ ನಾಲ್ವರು ಕಿಡಿಗೇಡಿಗಳು ಕ್ಯಾಬ್‌ ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 12 ಸಾವಿರ ಕೋಟಿ ಮೌಲ್ಯದ 2.5 ಟನ್ ಡ್ರಗ್ಸ್ ಜಪ್ತಿ – ಪಾಕ್ ಆರೋಪಿಯ ಬಂಧನ

app based

ಚಾಲಕನ ಮೊಬೈಲ್ ಫೋನ್ ಕೂಡ ಕ್ಯಾಬ್ ಒಳಗೆ ಇತ್ತು. ಘಟನೆಗೆ ಸಂಬಂಧಿಸಿದಂತೆ ಸೆಕ್ಟರ್ 10 ಎ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುಗ್ರಾಮ್‌ನಲ್ಲಿ ವಾಹನ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಪ್ರತಿದಿನ ಸುಮಾರು 9 ವಾಹನ ಕಳ್ಳತನ ಪ್ರಕರಣ ವರದಿಯಾಗುತ್ತಿವೆ. 2022 ರಲ್ಲಿ ಅಕ್ಟೋಬರ್ ವರೆಗೆ 2,893 ವಾಹನಗಳು ಕಳ್ಳತನವಾಗಿವೆ. 2021 ರಲ್ಲಿ 3,014 ವಾಹನಗಳನ್ನು ಕಳವು ಮಾಡಲಾಗಿದೆ. ಇದನ್ನೂ ಓದಿ: CBI ನಿರ್ದೇಶಕರ ಆಯ್ಕೆ ಪಟ್ಟಿಯಲ್ಲಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ಹೆಸರು

Share This Article